ರಾಂಚಿ: ‘ಪೊಲೀಸ್ ಮಹಾ ನಿರ್ದೇಶಕರಾಗಿ (ಡಿಜಿಪಿ) ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಅನುರಾಗ್ ಗುಪ್ತಾ ಅವರನ್ನು ತಕ್ಷಣದಿಂದಲೇ ಕರ್ತವ್ಯದಿಂದ ಬಿಡುಗಡೆಗೊಳಿಸಬೇಕು’ ಎಂದು ಚುನಾವಣಾ ಆಯೋಗವು ಜಾರ್ಖಂಡ್ ಸರ್ಕಾರಕ್ಕೆ ಶನಿವಾರ ನಿರ್ದೇಶನ ನೀಡಿದೆ.

‘ಕಳೆದ ಚುನಾವಣೆಗಳಲ್ಲಿನ ಅವರ ಕಾರ್ಯವಿಧಾನದ ಕುರಿತು ಹಲವು ದೂರುಗಳು ಬಂದಿವೆ. ಆದ್ದರಿಂದ, ಅವರ ಮೇಲೆ ಇರುವ ದೂರುಗಳ ‘ಇತಿಹಾಸ’ದ ಕಾರಣ ಗುಪ್ತಾ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಬೇಕು’ ಎಂದು ಆಯೋಗ ಹೇಳಿದೆ’ ಎಂದು ಮೂಲಗಳು ಮಾಹಿತಿ ನೀಡಿವೆ.

‘ಹಂಗಾಮಿ ಡಿಜಿಪಿಯನ್ನಾಗಿ ಬೇರೆಯವರನ್ನು ಆಯ್ಕೆ ಮಾಡಬೇಕು. ಇದಕ್ಕಾಗಿ ಡಿಜಿಪಿ ಮಟ್ಟದ ಐಪಿಎಸ್ ಅಧಿಕಾರಿಗಳ ಪಟ್ಟಿಯನ್ನು ತಕ್ಷಣವೇ ಕಳುಹಿಸಿ ಕೊಡಿ. ಇದೇ 21ರ ಬೆಳಿಗ್ಗೆಯ ಒಳಗಾಗಿ ಡಿಜಿಪಿಯನ್ನು ಆಯ್ಕೆ ಮಾಡಬೇಕು. ಪಟ್ಟಿಯಿಂದಲೇ ಯಾರಾದರೂ ಒಬ್ಬರನ್ನು ಆಯ್ಕೆ ಮಾಡಲಾಗುವುದು’ ಎಂದು ರಾಜ್ಯ ಸರ್ಕಾರಕ್ಕೆ ಆಯೋಗವು ಸೂಚನೆ ನೀಡಿದೆ.

2019ರ ವಿಧಾನಸಭೆ ಚುನಾವಣೆಯ ವೇಳೆ ಹೆಚ್ಚುವರಿ ಪೊಲೀಸ್ ನಿರ್ದೇಶಕರಾಗಿದ್ದ ಗುಪ್ತಾ ಅವರು, ಪಕ್ಷಪಾತಿ ಧೋರಣೆಯಿಂದ ಕಾರ್ಯನಿರ್ವಹಿಸಿದ್ದರು ಎಂದು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಪಕ್ಷವು ದೂರು ನೀಡಿತ್ತು. ಇದರಿಂದ ಗುಪ್ತಾ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಗಿತ್ತು. ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಜಾರ್ಖಂಡ್ ಪ್ರವೇಶಿಸದಂತೆಯೂ ಗುಪ್ತಾ ಅವರಿಗೆ ಸೂಚನೆ ನೀಡಲಾಗಿತ್ತು.

2016ರ ರಾಜ್ಯಸಭಾ ಚುನಾವಣೆಯ ವೇಳೆಯೂ ಅಧಿಕಾರ ದುರುಪಯೋಗ ಸೇರಿದಂತೆ ಗುಪ್ತಾ ಅವರ ವಿರುದ್ಧ ಹಲವು ಗಂಭೀರ ದೂರುಗಳು ಕೇಳಿಬಂದಿದ್ದವು. ಈ ಬಗ್ಗೆ ಆಯೋಗವು ವಿಚಾರಣಾ ಸಮಿತಿಯನ್ನು ರೂಪಿಸಿತ್ತು. ಈ ಬಗ್ಗೆ ಗುಪ್ತಾ ಅವರ ವಿರುದ್ಧ ಚಾರ್ಚ್ಶೀಟ್ ಅನ್ನೂ ದಾಖಲು ಮಾಡಲಾಗಿತ್ತು.
.ಜಾರ್ಖಂಡ್: ಎಜೆಎಸ್ಯು 10, JDU 2, LJP 1 ಕ್ಷೇತ್ರದಲ್ಲಿ ಸ್ಪರ್ಧೆ: ಅಸ್ಸಾಂ CM.ಜಾರ್ಖಂಡ್ ಚುನಾವಣೆ: 70 ಕ್ಷೇತ್ರಗಳಲ್ಲಿ ಕಾಂಗ್ರೆಸ್–ಜೆಎಂಎಂ ಮೈತ್ರಿ: ಹೇಮಂತ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.