ಕಾನ್ಪುರ(ಉತ್ತರ ಪ್ರದೇಶ): ₹1 ಸಾವಿರ ಕೋಟಿ ಮಾರುಕಟ್ಟೆ ಮೌಲ್ಯದ ಸರ್ಕಾರಿ ಭೂಕಬಳಿಕೆ ಮಾಡಿದ ಆರೋಪದ ಅಡಿಯಲ್ಲಿ ಟಿ.ವಿ ಪತ್ರಕರ್ತ ಸೇರಿದಂತೆ 14 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

‘ಕಂದಾಯ ಇಲಾಖೆ ಅಧಿಕಾರಿ ಹಾಗೂ ಜಮೀನು ಗುತ್ತಿಗೆ ಪಡೆದಿರುವ ಸ್ಯಾಮುಯೆಲ್ ಗುರುದೇವ್ ಸಿಂಗ್ ನೀಡಿದ ದೂರಿನ ಅನ್ವಯ ಪತ್ರಕರ್ತ ಅವನೀಶ್ ದೀಕ್ಷಿತ್ ಹಾಗೂ ಇತರರನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.

‘ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್ಐಆರ್ ಆಧರಿಸಿ, ದೀಕ್ಷಿತ್ ಹಾಗೂ ಇತರರನ್ನು ಬಂಧಿಸಲಾಗಿದೆ. ಉಳಿದವರನ್ನು ಬಂಧಿಸಲಾಗುವುದು’ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ (ಕಾನೂನು ಹಾಗೂ ಸುವ್ಯವಸ್ಥೆ) ಹರೀಶ್ ಚಂದ್ರ ತಿಳಿಸಿದರು.

ಆರೋಪಿಗಳ ವಿರುದ್ಧ ಭಾರತೀಯ ನ್ಯಾಯಸಂಹಿತಾ, ಸಾರ್ವಜನಿಕ ಆಸ್ತಿಪಾಸ್ತಿ ನಾಶ ತಡೆ ಅನ್ವಯ ಸೆಕ್ಷನ್ 61 (2) (ಕ್ರಿಮಿನಲ್ ಸಂಚು), 191(2) (ದೊಂಬಿ), 308(5) (ಸುಲಿಗೆ) 310 (2) (ಡಕಾಯಿತಿ), 324(4) (ದುಷ್ಕೃತ್ಯದಿಂದ ನಷ್ಟ) 329(4) (ಅತಿಕ್ರಮ ಪ್ರವೇಶ) 351(2) (ಬೆದರಿಕೆ) 352(ಉದ್ದೇಶಪೂರ್ವಕವಾಗಿ ಅವಮಾನ)ದ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದರು.

ದೀಕ್ಷಿತ್ ಅವರನ್ನು ಸೋಮವಾರವೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಇಲ್ಲಿನ ಸಿವಿಲ್ ಲೈನ್ಸ್ನಲ್ಲಿರುವ 7,500 ಚದರ ಮೀಟರ್ ವಿಸ್ತೀರ್ಣದ ಸರ್ಕಾರಿ ಜಾಗಕ್ಕೆ ಅಕ್ರಮವಾಗಿ ನುಗ್ಗಿದ ದೀಕ್ಷಿತ್ ಹಾಗೂ 36ಕ್ಕೂ ಅಧಿಕ ಜನರ ತಂಡವು ಅಲ್ಲಿದ್ದ ಕೊಠಡಿಯ ಬೀಗ ಒಡೆದು, ಸ್ವಾಧೀನಕ್ಕೆ ತೆಗೆದುಕೊಂಡಿದ್ದರು. ಈ ಕುರಿತಂತೆ ದೂರು ದಾಖಲಾದ ಬಳಿಕ ಬಂಧಿಸಲಾಗಿದೆ’ ಎಂದು ಕಾನ್ಪುರದ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಸಿಂಗ್ ತಿಳಿಸಿದರು.

‘ಭೂಮಿಯು ಸರ್ಕಾರಕ್ಕೆ ಸೇರಿದ್ದು, 1884ರಲ್ಲಿ 99 ವರ್ಷಗಳ ಅವಧಿಗೆ ಲೀಸ್ಗೆ ನೀಡಲಾಗಿತ್ತು. ಬಳಿಕ 25 ವರ್ಷಗಳ ಅವಧಿಗೆ ನವೀಕರಿಸಲಾಗಿತ್ತು. ಅದರ ಅವಧಿಯೂ ಮುಕ್ತಾಯಗೊಂಡಿದೆ ಎಂಬುದನ್ನು ಹೆಚ್ಚುವರಿ ಜಿಲ್ಲಾಧಿಕಾರಿ ನೇತೃತ್ವದ ಕಂದಾಯ ಇಲಾಖೆ ಅಧಿಕಾರಿಗಳ ತಂಡವು ಪತ್ತೆಹಚ್ಚಿದೆ’ ಎಂದು ಸಿಂಗ್ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.