ನವದೆಹಲಿ: ಕಾಂಗ್ರೆಸ್‌ನಲ್ಲಿ ಕಮಲ್ ನಾಥ್ ಮುಂದುವರಿಯುವರೋ ಇಲ್ಲವೋ ಎನ್ನುವ ಪ್ರಶ್ನೆಗೆ ಸೋಮವಾರವೂ ಉತ್ತರ ದೊರೆಯಲಿಲ್ಲ.

ತಮ್ಮ ಆಪ್ತರು ಹಾಗೂ ಸಹವರ್ತಿಗಳೊಂದಿಗೆ ಕಮಲ್ ನಾಥ್ ಸೋಮವಾರ ಸಭೆ ನಡೆಸಿದರು. ಆದರೆ, ಮಾಧ್ಯಮದವರ ಜತೆಗೆ ಏನನ್ನೂ ಮಾತನಾಡಲಿಲ್ಲ.

ಅವರ ನಿವಾಸದ ಮೇಲೆ ಹಾರಾಡುತ್ತಿದ್ದ ‘ಜೈ ಶ್ರೀ ರಾಮ್’ ಎಂಬ ಧ್ವಜವನ್ನು ತೆರವುಗೊಳಿಸಲಾಗಿದೆ ಎಂದು ಕೆಲವು ಮಾಧ್ಯಮ ವರದಿ ಮಾಡಿದ್ದವು. ಆ ಧ್ವಜ ಮತ್ತೆ ಅವರ ನಿವಾಸದ ಮೇಲೆ ಹಾರಾಡತೊಡಗಿದೆ.

ಕಮಲ್ ನಾಥ್ ಹಾಗೂ ಲೋಕಸಭಾ ಸದಸ್ಯರೂ ಆಗಿರುವ ಅವರ ಮಗ ನಕುಲ್ ನಾಥ್ ಕಾಂಗ್ರೆಸ್ ತೊರೆದು, ನಂತರ ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹವಿದೆ.

ಸೋಮವಾರ ಕಮಲ್ ನಾಥ್ ಅವರ ನಿವಾಸದಲ್ಲಿ ಸಭೆ ನಡೆದ ನಂತರ ಅವರ ಸಹವರ್ತಿ ಸಜ್ಜನ್ ಸಿಂಗ್ ವರ್ಮಾ ಮಾತನಾಡಿ, ‘40 ವರ್ಷಗಳ ಕಾಲ ಇದ್ದ ಕಾಂಗ್ರೆಸ್ ಪಕ್ಷವನ್ನು ತೊರೆಯುವ ಆಲೋಚನೆಯೇನೂ ಕಮಲ್ ನಾಥ್ ಅವರಿಗೆ ಇಲ್ಲ. ಅವರೇ ಹೈಕಮಾಂಡ್ ಆಗಿರುವಾಗ ಇಂತಹ ಪ್ರಶ್ನೆಯಾದರೂ ಹೇಗೆ ಮೂಡುತ್ತದೆ?’ ಎಂದು ಪ್ರತಿಕ್ರಿಯಿಸಿದರು.

ರಾಹುಲ್ ಗಾಂಧಿ ಅವರ 'ಭಾರತ್ ಜೋಡೊ ನ್ಯಾಯ ಯಾತ್ರೆ"ಯು ಭೋಪಾಲ್‌ನಲ್ಲಿ ನಡೆಯಲಿದ್ದು, ಅಲ್ಲಿ ಕಮಲ್ ನಾಥ್ ಸಭೆ ನಡೆಸಲಿದ್ದಾರೆ ಎಂದೂ ಸಜ್ಜನ್ ಸಿಂಗ್ ವರ್ಮಾ ತಿಳಿಸಿದರು.

‘ಮಧ್ಯಪ್ರದೇಶದಲ್ಲಿ ಲೋಕಸಭಾ ಚುನಾವಣೆ ಸಿದ್ಧತೆಗಳ ಕುರಿತು ಕಾಂಗ್ರೆಸ್ ಉಸ್ತುವಾರಿಗಳ ಜತೆಗೆ ಅವರು ಸಭೆ ನಡೆಸಲಿದ್ದಾರೆ. ಮಾಧ್ಯಮದ ಊಹಾಪೋಹದ ಬಗೆಗೆ ಸುಮ್ಮನೆ ಏನನ್ನು ಪ್ರತಿಕ್ರಿಯಿಸುವುದು ಎಂದು ಕಮಲ್ ನಾಥ್ ಅವರೇ ನನಗೆ ಹೇಳಿದರು’ ಎಂದು ಸಜ್ಜನ್ ಸಿಂಗ್ ಹೇಳಿದರು.
.ಬಿಜೆಪಿ ಪಾಳಯಕ್ಕೆ ಕಮಲ್‌ನಾಥ್?: ವದಂತಿ ಬೆನ್ನಲ್ಲೇ ದೆಹಲಿಯತ್ತ ತೆರಳಿದ ಶಾಸಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.