ಮುಂಬೈ: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರಿಗೆ ಸಂಸದೆ ಹಾಗೂ ಬಾಲಿವುಡ್ ನಟಿ ಕಂಗನಾ ರನೌತ್ ಅಭಿನಂದನೆ ತಿಳಿಸಿದ್ದಾರೆ. ಜೊತೆಗೆ ಡೆಮಾಕ್ರೆಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ ಸೋಲಿಗೆ ಹಾಲಿವುಡ್ ಸೆಲೆಬ್ರಿಟಿಗಳನ್ನು ದೂಷಿಸಿದ್ದಾರೆ.

ಹ್ಯಾರಿಸ್ ಪರ ಪ್ರಚಾರ ಮಾಡಿದ ಹಾಲಿವುಡ್ ಸೆಲೆಬ್ರಿಟಿಗಳ ಫೋಟೊವನ್ನು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿರುವ ಕಂಗನಾ, ‘ಕಮಲಾ ಹ್ಯಾರಿಸ್ ಪರ ಈ ವಿದೂಷಕರು ಪ್ರಚಾರ ಮಾಡಿದ ನಂತರ ಅವರ ರೇಟಿಂಗ್ ಪಾತಾಳಕ್ಕಿಳಿಯಿತು’ ಎಂದು ಬರೆದುಕೊಂಡಿದ್ದಾರೆ.

ಮುಂದುವರಿದು, ‘ಇಂತಹ ಜನರೊಂದಿಗೆ ಸುತ್ತಾಡುವ ಕಮಲಾ ಹ್ಯಾರಿಸ್ ಒಬ್ಬ ಕ್ಷುಲ್ಲಕ, ವಿಶ್ವಾಸಾರ್ಹವಲ್ಲದ ವ್ಯಕ್ತಿ ಎಂಬ ಅಭಿಪ್ರಾಯಕ್ಕೆ ಜನರು ಬಂದಿದ್ದರು. ಇದು ಅವರ ಸೋಲಿಗೆ ಕಾರಣವಾಯಿತು’ ಎಂದು ಕಂಗನಾ ಹೇಳಿದ್ದಾರೆ.

ಕಮಲಾ ಹ್ಯಾರಿಸ್ ಪರ ಪಾಪ್ ಗಾಯಕಿಯರಾದ ಟೇಲರ್ ಸ್ವಿಫ್ಟ್, ಅರಿಯಾನಾ ಗ್ರಾಂಡೆ, ರಿಹಾನ್ನ, ಬಿಲ್ಲಿ ಎಲಿಶ್, ಕೇಟಿ ಪೆರ್ರಿ, ರ್ಯಾಪರ್ ಕಾರ್ಡಿ ಬಿ ಮತ್ತು ಇತರರು ಪ್ರಚಾರ ಮಾಡಿದ್ದರು.

‘ನಾನು ಅಮೆರಿಕದ ಪ್ರಜೆಯಾಗಿದ್ದರೆ ಖಂಡಿತವಾಗಿಯೂ ಟ್ರಂಪ್ ಅವರಿಗೆ ಮತ ಹಾಕುತ್ತಿದ್ದೆ’ ಎಂದು ಕಂಗನಾ ಮಂಗಳವಾರ ಹೇಳಿದ್ದರು.

ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಟ್ರಂಪ್ ಗೆಲುವು ಸಾಧಿಸಿದ್ದಾರೆ.

ಫ್ಲೊರಿಡಾದಲ್ಲಿ ವೆಸ್ಟ್ ಪಾಮ್ ಬೀಚ್ನಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, ‘ಅಮೆರಿಕ ನಮಗೆ ಅಭೂತಪೂರ್ವ ಹಾಗೂ ಶಕ್ತಿಯುತ ಜನಾದೇಶವನ್ನು ನೀಡಿದೆ’ ಎಂದು ತಮ್ಮ ಗೆಲುವನ್ನು ಘೋಷಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.