‘ಹಿಂದುತ್ವ ಪರ, ದೇಶ ವಿರೋಧಿಗಳ ವಿರುದ್ಧ ಮಾತನಾಡಿದ ಫಲವಾಗಿ ಹಲವಾರು ಜಾಹೀರಾತುಗಳಿಂದ ನನ್ನನ್ನು ಕೈಬಿಟ್ಟಿದ್ದು, ವರ್ಷದಲ್ಲಿ ಸುಮಾರು 30ರಿಂದ 40 ಕೋಟಿಗಳಷ್ಟು ಹಣವನ್ನು ಕಳೆದುಕೊಂಡಿದ್ದೇನೆ‘ ಎಂದು ಬಾಲಿವುಡ್ ನಟಿ ಕಂಗನಾ ರನೌತ್ ಹೇಳಿದ್ದಾರೆ.

ಇತ್ತೀಚೆಗೆ ಟ್ವಿಟರ್ ಒಡೆಯ ಎಲಾನ್ ಮಸ್ಕ್, ‘ಹಣ ಕಳೆದುಕೊಂಡರೂ ಪರವಾಗಿಲ್ಲ ನಾನು ಏನು ಹೇಳಬೇಕೋ ಅದನ್ನೇ ಹೇಳುತ್ತೇನೆ‘ ಎಂದು ಹೇಳಿದ್ದರು. ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಎಲಾನ್ ಮಸ್ಕ್ ಹೇಳಿಕೆಯನ್ನು ಉಲ್ಲೇಖಿಸಿದ ಕಂಗನಾ ರಾಣಾವತ್, ‘ಇದು ಸ್ವಾತಂತ್ರ್ಯ ಮತ್ತು ಯಶಸ್ಸು‘ ಎಂದು ಬರೆದುಕೊಂಡಿದ್ದಾರೆ.

‘ಹಿಂದುತ್ವ ಪರ, ತುಕಡೆ–ತುಕಡೆ ಗ್ಯಾಂಗ್ ಮತ್ತು ದೇಶ ವಿರೋಧಿಗಳ ವಿರುದ್ಧ ಮಾತನಾಡಿದ್ದಕ್ಕೆ ರಾತ್ರಿ ಬೆಳಗಾಗುವುದರೊಳಗೆ ನನ್ನನ್ನು 20ರಿಂದ 25 ಜಾಹೀರಾತುಗಳಿಂದ ಕೈಬಿಡಲಾಯಿತು. ಇದರಿಂದ ವರ್ಷದಲ್ಲಿ ಸುಮಾರು ₹30 ರಿಂದ ₹40 ಕೋಟಿ ರೂಪಾಯಿ ಕಳೆದುಕೊಂಡಿದ್ದೇನೆ‘ ಎಂದು ಕಂಗನಾ ಬರೆದುಕೊಂಡಿದ್ದಾರೆ.

‘ಇಷ್ಟಾದರೂ ನಾನು ಸ್ವತಂತ್ರವಾಗಿ ಮಾತನಾಡುತ್ತಿದ್ದೇನೆ. ನನಗೆ ಏನು ಬೇಕೋ ಅದನ್ನು ಹೇಳುತ್ತಿದ್ದೇನೆ. ಯಾವುದರಿಂದಲೂ ನನ್ನನ್ನು ತಡೆಯಲು ಸಾಧ್ಯವಿಲ್ಲ. ಹಣದ ಬಗ್ಗೆ ಎಲಾನ್ ಮಸ್ಕ್ ಚಿಂತಿಸದಿರುವುದು ಪ್ರಶಂಸನೀಯ‘ ಎಂದು ಹೇಳಿದರು.

ಇತ್ತೀಚೆಗೆ ಭಾರತದ ಖಾದ್ಯವೊಂದಕ್ಕೆ ಎಲಾನ್ ಮಸ್ಕ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿದ ಕಂಗನಾ, ‘ನಿಮ್ಮನ್ನು ಹೆಚ್ಚು ಇಷ್ಟಪಡಲು ನೀವು ನಮಗೆ ಇನ್ನೂ ಎಷ್ಟು ಕಾರಣಗಳನ್ನು ನೀಡುತ್ತೀರಿ?‘ ಎಂದು ಕೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.