ಬುಧವಾರ, 25 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೃಷಿ ಕಾನೂನುಗಳನ್ನು ಮರು ಜಾರಿ ಮಾಡಬೇಕೆಂದು ಹೇಳಿ ಉಲ್ಟಾ ಹೊಡೆದ ಕಂಗನಾ

Published : 25 ಸೆಪ್ಟೆಂಬರ್ 2024, 9:39 IST
Last Updated : 25 ಸೆಪ್ಟೆಂಬರ್ 2024, 9:39 IST
ಫಾಲೋ ಮಾಡಿ
Comments

ಶಿಮ್ಲಾ: ರದ್ದಾದ ಮೂರು ಕೃಷಿ ಕಾನೂನುಗಳನ್ನು ಮರು ಜಾರಿಗೊಳಿಸಬೇಕು ಎಂಬ ತಮ್ಮ ಹೇಳಿಕೆಯನ್ನು ಹಿಂಪಡೆದುಕೊಂಡಿರುವುದಾಗಿ ಬಾಲಿವುಡ್ ನಟಿ, ಬಿಜೆಪಿ ಸಂಸದೆ ಕಂಗನಾ ರನೌತ್ ತಿಳಿಸಿದ್ದಾರೆ.

ಈ ಕುರಿತ ವಿಡಿಯೊ ಹೇಳಿಕೆಯನ್ನು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಕಂಗನಾ, ‘ಇದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದ್ದು, ಪಕ್ಷದ ನಿಲುವು ಅಲ್ಲ’ ಎಂದಿದ್ದಾರೆ.

‘ಮೊದಲ ಬಾರಿಗೆ ಮೂರು ಕೃಷಿ ಕಾನೂನುಗಳನ್ನು ಪ್ರಸ್ತಾಪಿಸಿದಾಗ, ನಾವೆಲ್ಲರೂ ಅದನ್ನು ಬೆಂಬಲಿಸಿದ್ದೇವು. ರೈತರ ಮೇಲಿನ ಕಾಳಜಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ಆ ಕಾನೂನುಗಳನ್ನು ರದ್ದುಗೊಳಿಸಿದರು. ಅವರ ಮಾತನ್ನು ಘನತೆಯಿಂದ ಪಾಲಿಸುವುದು ಪಕ್ಷದ ಎಲ್ಲ ಕಾರ್ಯಕರ್ತರ ಜವಾಬ್ದಾರಿಯಾಗಿದೆ’ ಎಂದು ಹೇಳಿದರು.

‘ಈಗ ನಾನು ನಟಿ ಮಾತ್ರ ಅಲ್ಲ ಬಿಜೆಪಿಯ ಸದಸ್ಯೆಯೂ ಹೌದು. ನನ್ನ ಅಭಿಪ್ರಾಯಗಳು ವೈಯಕ್ತಿಕವಾಗಿರದೇ ಪಕ್ಷದ ನಿಲುವನ್ನು ಪ್ರತಿನಿಧಿಸುವಂತಿರಬೇಕು’ ಎಂದು ವಿಷಾದ ವ್ಯಕ್ತಪಡಿಸಿದರು.

‘ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಅದಕ್ಕಾಗಿ ನಾನು ವಿಷಾದಿಸುತ್ತೇನೆ. ನಾನು ನನ್ನ ಹೇಳಿಕೆಗಳನ್ನು ಹಿಂಪಡೆದುಕೊಳ್ಳುತ್ತಿದ್ದೇನೆ’ ಎಂದರು.

ಮಂಗಳವಾರ(ಸೆ.24) ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಕಂಗನಾ, ‘ರೈತರ ಹಿತಾಸಕ್ತಿಯ ದೃಷ್ಟಿಯಿಂದ ರದ್ದಾದ ಮೂರು ಕೃಷಿ ಕಾಯ್ದೆಗಳನ್ನು ಮತ್ತೆ ಜಾರಿಗೆ ತರಬೇಕು’ ಎಂದು ಹೇಳಿದ್ದರು.

ಕಂಗಾನಾ ಹೇಳಿಕೆಯಿಂದ ಸ್ವತಃ ಬಿಜೆಪಿಯೇ ಅಂತರ ಕಾಯ್ದುಗೊಂಡಿದ್ದು, ಇದು ಅವರ(ಕಂಗನಾ) ವೈಯಕ್ತಿಕ ಅಭಿಪ್ರಾಯವಾಗಿದೆ ಎಂದು ತಿಳಿಸಿತ್ತು. ವಿರೋಧ ವ್ಯಕ್ತವಾಗುತ್ತಲೇ ಹೇಳಿಕೆ ಹಿಂಪಡೆದಿರುವುದಾಗಿ ಕಂಗನಾ ತಿಳಿಸಿದ್ದಾರೆ.

ಹರಿಯಾಣ ವಿಧಾನಸಭಾಗೆ ಅಕ್ಟೋಬರ್ 5ರಂದು ಚುನಾವಣೆ ನಡೆಯಲಿದ್ದು, ರೈತ ವಿರೋಧಿ ಹೇಳಿಕೆ ನೀಡದಂತೆ ಕಂಗನಾ ಅವರಿಗೆ ಪಕ್ಷ ತಾಕೀತು ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT