ಶ್ರೀನಗರ : ಭಾರತೀಯ ಸಶಸ್ತ್ರ ಪಡೆಗಳ ವಿಜಯದ ಸ್ಮರಣಾರ್ಥ ಮತ್ತು ‘ಆಪರೇಷನ್ ವಿಜಯ್’ನಲ್ಲಿ ಸೈನಿಕರ ಪರಮೋಚ್ಚ ತ್ಯಾಗಕ್ಕೆ ಗೌರವ ಸಲ್ಲಿಸಲು ಕಾರ್ಗಿಲ್‌ನ ಡ್ರಾಸ್‌ನಲ್ಲಿರುವ ಪಾಯಿಂಟ್ 5140 ಅನ್ನು 'ಗನ್ ಹಿಲ್' ಎಂದು ನಾಮಕರಣ ಮಾಡಲಾಗಿದೆ ಎಂದು ರಕ್ಷಣಾ ವಕ್ತಾರರು ಶನಿವಾರ ತಿಳಿಸಿದರು.

ಆಪರೇಷನ್ ವಿಜಯ್‌ನಲ್ಲಿ ‘ಕಾರ್ಗಿಲ್’ ಎಂಬ ಗೌರವ ಪ್ರಶಸ್ತಿಯನ್ನು ಪಡೆದ ಎಲ್ಲಾ ಫಿರಂಗಿ ರೆಜಿಮೆಂಟ್‌ಗಳ ಅನುಭವಿಗಳ ಉಪಸ್ಥಿತಿಯಲ್ಲಿ ಸಮಾರಂಭವನ್ನು ನಡೆಸಲಾಯಿತು. ಈ ವೇಳೆ ಮಾತನಾಡಿದ ರಕ್ಷಣಾ ವಕ್ತಾರರು, ‘ಮಾರಕ ಮತ್ತು ನಿಖರವಾದ ಬಂದೂಕು ಶಕ್ತಿ, ಫಿರಂಗಿ ರೆಜಿಮೆಂಟ್‌ನೊಂದಿಗೆ, ಪಾಯಿಂಟ್ 5140 ಸ್ಥಳವೂ ಸೇರಿದಂತೆ ಶತ್ರು ಪಡೆಗಳಿಗೆತಕ್ಕ ಉತ್ತರವನ್ನು ನೀಡಲು ಸಾಧ್ಯವಾಯಿತು. ಇದು 1999ರ ಕಾರ್ಗಿಲ್ ಯುದ್ಧ ತ್ವರಿತವಾಗಿ ಕೊನೆಗೊಳ್ಳಲು ಪ್ರಮುಖ ಕಾರಣವಾಯಿತು’ ಎಂದರು.

‘ಫಿರಂಗಿ ರೆಜಿಮೆಂಟ್ ಪರವಾಗಿ, ಕಾರ್ಗಿಲ್ ಯುದ್ಧ ಸ್ಮಾರಕ ದ್ರಾಸ್‌ನಲ್ಲಿ ಫಿರಂಗಿ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಟಿ.ಕೆ. ಚಾವ್ಲಾ ಪುಷ್ಪಗುಚ್ಛವನ್ನು ಅರ್ಪಿಸಿದರು. ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅನುಭವಿ ಬಂದೂಕುಧಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು’ ಎಂದು ವಕ್ತಾರರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.