ನೈರೋಬಿ: ಪೂರ್ವ ಆಫ್ರಿಕನ್ ರಾಷ್ಟ್ರ ಕೀನ್ಯಾದ ಅಧ್ಯಕ್ಷರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ವಿಲಿಯಮ್ ರುಟೊ ವಿಜಯಶಾಲಿಯಾಗಿದ್ದಾರೆ.

ರುಟೊ ಅವರು ಕೀನ್ಯಾದ ಯುನೈಟೆಡ್ ಡೆಮಾಕ್ರಟಿಕ್ ಒಕ್ಕೂಟದ ನೇತಾರರಾಗಿದ್ದಾರೆ. ಅಲ್ಲದೇ ಅವರು ಕೀನ್ಯಾದ ಪ್ರಸ್ತುತ ಉಪಾಧ್ಯಕ್ಷರಾಗಿದ್ದಾರೆ.

ಕಳೆದ ಆಗಸ್ಟ್ 9 ರಂದು ನಡೆದ ಅಧ್ಯಕ್ಷೀಯಚುನಾವಣೆಯಲ್ಲಿ ಶೇ 50.49 ರಷ್ಟು ಮತಗಳನ್ನು ಪಡೆಯುವ ಮೂಲಕ ರುಟೊ ವಿಜಯಶಾಲಿಯಾಗಿದ್ದಾರೆ. ಅವರ ಪ್ರತಿಸ್ಪರ್ಧಿ ಕೀನ್ಯಾದ ಮಾಜಿ ಪ್ರಧಾನಿ ರೈಲಾ ಓಡಿಂಗಾ ಪರಾಭವಗೊಂಡಿದ್ದಾರೆ. ಒಡಿಂಗಾ ಶೇ 48.85 ರಷ್ಟು ಮತಗಳನ್ನು ಪಡೆದಿದ್ದಾರೆ.

ಪ್ರಸ್ತುತ ಕೀನ್ಯಾದ ಅಧ್ಯಕ್ಷರಾಗಿರುವ ಉಹುರು ಕೀನ್ಯಾಟ್ಟಾ ಅವರ ಅವಧಿ ಆಗಸ್ಟ್ ಅಂತ್ಯಕ್ಕೆ ಕೊನೆಗೊಳ್ಳಲಿದೆ.

ಏತನ್ಮಧ್ಯೆ ರುಟೊ ಅವರ ಫಲಿತಾಂಶವನ್ನು ರೈಲಾ ಒಡಿಂಗಾ ಹಾಗೂ ಅವರ ಬೆಂಬಲಿಗರು ತೀವ್ರವಾಗಿ ವಿರೋಧಿಸಿದ್ದಾರೆ. ಅಲ್ಲಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆದಿವೆ. ಈ ಫಲಿತಾಂಶವನ್ನು ರದ್ದುಗೊಳಿಸಬೇಕು ಎಂದು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ಆದರೆ, ಏಳು ಸದಸ್ಯರಿರುವ ಚುನಾವಣಾ ಆಯೋಗದ ನಾಲ್ಕು ಸದಸ್ಯರು ಓಡಿಂಗಾ ಅವರ ಮನವಿಯನ್ನು ತಿರಸ್ಕರಿಸಿದ್ದಾರೆ.

ಈ ಚುನಾವಣೆಯನ್ನು ರುಟೊ ಅವರು ಅತ್ಯಂತ ಪ್ರಜಾಸತ್ತಾತ್ಮಕ ಹಾಗೂ ಐತಿಹಾಸಿಕ ಎಂದು ಬಣ್ಣಿಸಿದ್ದಾರೆ. ರುಟೊ ಅವರಿಗೆ ಜಾಗತಿಕನಾಯಕರು ಶುಭಾಶಯ ಕೋರಿದ್ದು, ಅವರ ಬೆಂಬಲಿಗರು ಕೀನ್ಯಾದಲ್ಲಿ ವಿಜಯೋತ್ಸವ ಆಚರಿಸುತ್ತಿದ್ದಾರೆ.

ಕೀನ್ಯಾದ ಸಂಸತ್ತು ಸೆನೆಟ್ (ಮೇಲ್ಮನೆ) ಹಾಗೂ ನ್ಯಾಷನಲ್ ಅಸೆಂಬ್ಲಿ (ಕೆಳಮನೆ) ಎಂಬ ಸದನಗಳನ್ನು ಹೊಂದಿದೆ.ನ್ಯಾಷನಲ್ ಅಸೆಂಬ್ಲಿ 349 ಸ್ಥಾನಗಳನ್ನು ಹೊಂದಿದ್ದರೆ, ಸೆನೆಟ್ 47 ಸ್ಥಾನಗಳನ್ನು ಹೊಂದಿದೆ.

ಆಶ್ಚರ್ಯಕರ ವಾಸ್ತುಶಿಲ್ಪಕ್ಕೆ ಹೆಸರಾಗಿದ್ದ ಲಖನೌದ 230 ವರ್ಷ ಹಳೆಯಸ್ಮಾರಕ ಕುಸಿತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.