ತಿರುವನಂತಪುರ: ಕೋಲ್ಕತ್ತ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಬೆನ್ನಲ್ಲೇ ರಾಜ್ಯದಲ್ಲಿನ ವೈದ್ಯಕೀಯ ಕಾಲೇಜುಗಳಲ್ಲಿನ ಉದ್ಯೋಗಿಗಳಿಗೆ ಭದ್ರತೆ ಒದಗಿಸುವ ಉದ್ದೇಶದಿಂದ ಕೇರಳ ಸರ್ಕಾರವು ವೈದರ ಕೆಲಸದ ಸ್ಥಳದ ಲೋಪದೋಷಗಳ ಕುರಿತ ವ್ಯವಸ್ಥಿತ ಪರಿಶೀಲನೆ (ಸ್ಪೇಸ್ ಆಡಿಟ್) ನಡೆಸಲು ಆದೇಶಿಸಿದೆ.

ಆಡಿಟ್ ನಡೆಸುವಂತೆ ವೈದ್ಯಕೀಯ ಶಿಕ್ಷಣ ನಿರ್ದೇಶಕರಿಗೆ ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ನಿರ್ದೇಶಿಸಿದ್ದಾರೆ. ವೈದ್ಯಕೀಯ ಕಾಲೇಜುಗಳ ಉನ್ನತ ಮಟ್ಟದ ಸಭೆ ನಡೆಸಿದ ಬಳಿಕ ಈ ಆದೇಶವನ್ನು ಹೊರಡಿಸಲಾಗಿದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.

ಕೇರಳದ ವೈದ್ಯಕೀಯ ಕಾಲೇಜುಗಳಲ್ಲಿ ಸುರಕ್ಷತೆ ಒದಗಿಸುವ ಸಲುವಾಗಿ ಅಣಕು ಪ್ರದರ್ಶನಗಳನ್ನು ಆಯೋಜಿಸುವುದು, ಸಾರ್ವಜನಿಕ ವಿಳಾಸ ವ್ಯವಸ್ಥೆ, ಸಿಸಿಟಿವಿ ಮತ್ತು ಅಲಾರಂಗಳನ್ನು ಅಳವಡಿಸುವುದು, ವಾಕಿ–ಟಾಕಿಗಳನ್ನು ಬಳಸುವುದು, ಭದ್ರತಾ ಮೇಲ್ವಿಚಾರಣೆಯನ್ನು ತೀವ್ರಗೊಳಿಸುವುದು ಹಾಗೂ ಅನಧಿಕೃತ ವ್ಯಕ್ತಿಗಳನ್ನು ರಾತ್ರಿ ವೇಳೆ ಆಸ್ಪತ್ರೆಗಳಲ್ಲಿ ತಂಗಲು ಅನುಮತಿಸದಿರುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳುವಂತೆ ಸಚಿವರು ಆದೇಶಿಸಿದ್ದಾರೆ ಎಂದು ಪ್ರಕಟಣೆ ಹೇಳಿದೆ.

ಅಲ್ಲದೆ ರಾತ್ರಿ ವೇಳೆ ಕರ್ತವ್ಯ ಮುಗಿಸಿ ವಸತಿ ನಿಲಯಕ್ಕೆ ವಾಪಸಾಗುವ ಮಹಿಳಾ ಉದ್ಯೋಗಿಗಳ ಸುರಕ್ಷತೆಯನ್ನು ಖಾತ್ರಿಪಡಿಸಬೇಕು. ಬೀದಿ ನಾಯಿಗಳ ದಾಳಿಯಿಂದ ಸಿಬ್ಬಂದಿ ಮತ್ತು ಆಸ್ಪತ್ರೆಗೆ ಭೇಟಿ ನೀಡುವವರನ್ನು ರಕ್ಷಿಸಲು ಜಿಲ್ಲಾಡಳಿತದ ಸಹಯೋಗದಲ್ಲಿ ಯೋಜನೆ ಜಾರಿಗೊಳಿಸಬೇಕು ಎಂದು ಜಾರ್ಜ್ ಆದೇಶಿಸಿದ್ದಾರೆ.

ಎಲ್ಲಾ ವೈದ್ಯಕೀಯ ಕಾಲೇಜುಗಳು ‘ಕೋಡ್ ಗ್ರೇ ಪ್ರೋಟೋಕಾಲ್’ ಅನ್ನು ಜಾರಿಗೆ ತರಬೇಕು ಎಂದು ಸಚಿವರು ನಿರ್ದೇಶನ ನೀಡಿದ್ದಾರೆ. ರೋಗಿಯನ್ನು ಒಳಗೊಂಡಂತೆ ಯಾರಾದರೂ ಆಕ್ರಮಣಕಾರಿ, ನಿಂದನೀಯ, ಹಿಂಸಾತ್ಮಕ ಅಥವಾ ಬೆದರಿಕೆಯ ವರ್ತನೆಯನ್ನು ಪ್ರದರ್ಶಿಸಿದರೆ ‘ಕೋಡ್ ಗ್ರೇ ಪ್ರೋಟೋಕಾಲ್’ ಅನ್ನು ಬಳಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.