ತಿರುವನಂತಪುರ: ಕೋವಿಡ್ ಕಾರಣದಿಂದಾಗಿ, ತನ್ನ ಅಧೀನದಲ್ಲಿರುವ ದೇವಸ್ಥಾನಗಳಲ್ಲಿ ಈ ವರ್ಷ ‘ಬಲಿ ತರ್ಪಣಂ’ ಆಚರಿಸದಿರಲು ಕೇರಳದ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ನಿರ್ಧರಿಸಿದೆ.

ಇತ್ತೀಚಿಗೆ ನಡೆದ ಮಂಡಳಿಯ ಉನ್ನತ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಪ್ರತಿವರ್ಷ ಕೇರಳದ ದೇವಸ್ಥಾನಗಳ ಆವರಣದಲ್ಲಿ ಸಾವಿರಾರು ಭಕ್ತರು ಪೂರ್ವಜರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ‘ಬಲಿ ತರ್ಪಣಂ’ ವಿಧಿಯನ್ನು ನೆರವೇರಿಸುತ್ತಾರೆ.

ಹಿಂದೂ ಸಮುದಾಯದವರು ‘ಕರ್ಕಿಡಕ ವಾವು’ ನಿಮಿತ್ತ ಸಮುದ್ರ ಮತ್ತು ನದಿ ತೀರದಲ್ಲೂ ಈ ಧಾರ್ಮಿಕ ವಿಧಿಯನ್ನು ನೆರವೇರಿಸುತ್ತಾರೆ. ಈ ದಿನದಂದು ‘ಬಲಿ ತರ್ಪಣಂ’ ಸಮರ್ಪಿಸಿದರೆ, ಪೂರ್ವಜರ ಆತ್ಮಕ್ಕೆ ಶಾಂತಿ ಸಿಗಲಿದೆ ಎಂಬ ನಂಬಿಕೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.