ವಯನಾಡು: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಸಿಲುಕಿ ಮೃತಪಟ್ಟವರ ಸಂಖ್ಯೆ 123ಕ್ಕೆ ಏರಿಕೆಯಾಗಿದೆ. 128 ಜನ ಗಾಯಗೊಂಡಿದ್ದು ಕೇರಳದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸರ್ಕಾರಿ ಮೂಲಗಳು ಮಾಹಿತಿ ನೀಡಿವೆ.

ಇನ್ನೂ ನೂರಾರು ಜನರು ಮಣ್ಣಿನಡಿ ಸಿಲುಕಿರುವ ಶಂಕೆಯಿದ್ದು ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಯಿದೆ. ರಕ್ಷಣಾ ತಂಡ ಸ್ಥಳದಲ್ಲಿ ಬೀಡುಬಿಟ್ಟಿದ್ದು ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಿದೆ.

ಪ್ರೀತಿ ಪಾತ್ರರಿಗಾಗಿ ದುಃಖಿಸುವ, ತಮ್ಮವರನ್ನು ಕಳೆದುಕೊಂಡು ಸಂಬಂಧಿಕರೊಂದಿಗೆ ದೂರವಾಣಿ ಕರೆಗಳಲ್ಲಿ ವಿಷಯ ಹಂಚಿಕೊಂಡು ಗೋಳಾಡುವ ದೃಶ್ಯಗಳು ಮನಕಲಕುವಂತಿದೆ.

ರಾತ್ರಿ ಸುಖ ನಿದ್ದೆಯಲ್ಲಿ ಮಲಗಿದ್ದ ಜನರು, ಮಕ್ಕಳು ಈಗ ಜೀವ ಕಳೆದುಕೊಂಡು ಮಣ್ಣಿನಡಿಯಾಗಿದ್ದಾರೆ. ತೀವ್ರವಾದ ಮಳೆಯಿಂದಾಗಿ ಭೂ ಕುಸಿತ ಸಂಭವಿಸಿದೆ. ಭೂಕುಸಿತ ಸಂಭವಿಸಿದ ಗ್ರಾಮಗಳು ಸಂಪೂರ್ಣವಾಗಿ ನಾಶವಾಗಿವೆ. ಜಿಲ್ಲೆಯಾದ್ಯಂತ 45ಕ್ಕೂ ಹೆಚ್ಚು ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದ್ದು, ಈವರೆಗೆ 30 ಸಾವಿರಕ್ಕೂ ಹೆಚ್ಚು ಜನರನ್ನು ಅಲ್ಲಿಗೆ ಸ್ಥಳಾಂತರಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮಂಗಳವಾರ ನಸುಕಿನ 2 ಗಂಟೆ ವೇಳೆಗೆ ಮೊದಲ ಭೂಕುಸಿತ ಸಂಭವಿಸಿದೆ, ಬಳಿಕ ಬೆಳಗಿನ ಜಾವ 4.10ಕ್ಕೆ ಮತ್ತೆ ಭೂಕುಸಿತ ಸಂಭವಿಸಿದ್ದು, ಮೆಪ್ಪಾಡಿ, ಮುಂಡಕ್ಕ್ಕೈ ಮತ್ತು ಚೂರಲ್ಮಾಲಾ ಪ್ರದೇಶಗಳ ಸಂಪರ್ಕ ಕಡಿತಗೊಂಡಿದೆ. ಗ್ರಾಮಸ್ಥರು ಮಲಗಿದ್ದ ವೇಳೆ ಭೂಕುಸಿತ ಸಂಭವಿಸಿದ್ದರಿಂದ ಅಪಾಯದ ಮುನ್ಸೂಚನೆ ತಿಳಿಯದಾಯಿತು. ಪರಿಣಾಮ ಹೆಚ್ಚಿನ ಸಾವು ನೋವುಗಳು ಸಂಭವಿಸಿವೆ. ವೆಲ್ಲಾರಿಮಾಲಾ ಪ್ರದೇಶದಲ್ಲಿ ಶಾಲೆಯೊಂದು ಸಂಪೂರ್ಣವಾಗಿ ಮಣ್ಣಿನಡಿಯಾಗಿದ್ದು, ಇರುವಝಿಂಜಿಪುಳ ನದಿ ಎರಡು ಭಾಗಗಳಾಗಿ ಹರಿಯುತ್ತಿದೆ.

ಸೇನೆ, ನೌಕಾಪಡೆ ಮತ್ತು ಎನ್ಡಿಆರ್ಎಫ್ ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಪ್ರತಿಕೂಲ ಹವಾಮಾನ ಸ್ಥಿತಿ ಮುಂದುವರಿದಿದೆ. ಆದರೂ ಸಿಬ್ಬಂದಿ ಜನರ ರಕ್ಷಣೆಯಲ್ಲಿ ನಿರತರಾಗಿದ್ದಾರೆ ಎಂದು ಸಿಎಂ ವಯನಾಡಿನ ಸ್ಥಿತಿಯ ಬಗ್ಗೆ ಮಾಹಿತಿ ನೀಡಿದರು.
.ವಯನಾಡು; ಭಾರಿ ಮಳೆಯಿಂದಾಗಿ ಭೂಕುಸಿತ: ಹಲವರು ಮಂದಿ ಸಿಲುಕಿರುವ ಶಂಕೆ .Wayanad landslides | ಚಿತ್ರಗಳಲ್ಲಿ ನೋಡಿ: ವಯನಾಡು ಭೂಕುಸಿತದ ಭೀಕರತೆ.ವಯನಾಡು ಭೂಕುಸಿತ: ಮೃತರ ಕುಟುಂಬಗಳಿಗೆ ತಲಾ ₹2 ಲಕ್ಷ ಪರಿಹಾರ ಘೋಷಿಸಿದ ಕೇಂದ್ರ.ವಯನಾಡು ಭೂಕುಸಿತ ದುರಂತ: ಮರಳಿ ಬರುವ ವಿಶ್ವಾಸದಲ್ಲಿ ಕಳೆದು ಹೋದವರ ಹುಡುಕಾಟ.ವಯನಾಡು ಭೂಕುಸಿತ ದುರಂತ: ದೇಶದ ಶೇ 4.3ರಷ್ಟು ಭೂಭಾಗಕ್ಕೆ ಕುಸಿತದ ಭೀತಿ.ವಯನಾಡು ಭೂಕುಸಿತ ದುರಂತ: ಕೇರಳದಲ್ಲಿ 2 ದಿನ ಶೋಕಾಚರಣೆ– CM ಪಿಣರಾಯಿ ವಿಜಯನ್ ಆದೇಶ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.