ಕೊಚ್ಚಿ: ಅಂತರರಾಷ್ಟ್ರೀಯ ಮಾದಕವಸ್ತು ಜಾಲದಲ್ಲಿ ಭಾಗಿಯಾಗಿದ್ದ ಕಾಂಗೊ ಪ್ರಜೆಯನ್ನು ಕೇರಳದ ಎರ್ನಾಕುಲಂ ಗ್ರಾಮಾಂತರ ಪೊಲೀಸರು ಕರ್ನಾಟಕ ಪೊಲೀಸರ ಸಹಾಯದೊಂದಿಗೆ ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ಕೇರಳದ ಅಂಗಾಮಲೈನಲ್ಲಿ 200 ಗ್ರಾಂ ಎಂಡಿಎಂಎಯೊಂದಿಗೆ ವಿಪಿನ್ ಎಂಬಾತನನ್ನು ಕಳೆದ ತಿಂಗಳು ಬಂಧಿಸಲಾಗಿತ್ತು. ವಿಪಿನ್‌ನ ಚಟುವಟಿಕೆಗಳ ಕುರಿತು ತನಿಖೆ ನಡೆಸಿದ ವೇಳೆ ಕಾಂಗೊ ಪ್ರಜೆ ರೆಂಗಾರ ಪೌಲ್ ಕುರಿತು ಸುಳಿವು ದೊರಕಿತು. ಪೌಲ್ 2014ರಿಂದ ಬೆಂಗಳೂರಿನಲ್ಲಿ ವಿದ್ಯಾರ್ಥಿ ವೀಸಾದಲ್ಲಿ ನೆಲೆಸಿದ್ದಾನೆ. ಶಿಕ್ಷಣ ಪಡೆಯುವುದರ ಬದಲಾಗಿ ಆತ ಮಾದಕವಸ್ತು ಕಳ್ಳಸಾಗಣೆಯಲ್ಲಿ ತೊಡಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾದಕವಸ್ತು ಕಳ್ಳಸಾಗಣೆದಾರರ ನಡುವೆ ‘ಕ್ಯಾಪ್ಟನ್’ ಎಂದು ಕರೆಸಿಕೊಳ್ಳುವ ಪೌಲ್, ಕೇರಳಕ್ಕೆ ಮಾದಕವಸ್ತು ರವಾನೆ ಮಾಡುತ್ತಿರುವವರಲ್ಲಿ ಪ್ರಮುಖನು. ‘ಕುಕ್’ ಎಂಬ ಹೆಸರಿನ ಮಾದಕವಸ್ತುವನ್ನು ಖುದ್ದು ಆತ ತಯಾರಿಸಿದ್ದಾನೆ. ಅದು ಕೋಟ್ಯಂತರ ರೂಪಾಯಿ ಬೆಲೆಬಾಳುತ್ತದೆ ಎನ್ನಲಾಗಿದೆ.

ಪೌಲ್ ತಂಡವು ಅತ್ಯಂತ ಗುಪ್ತವಾಗಿ ಕಾರ್ಯಾಚರಿಸುತ್ತದೆ. ಹಲವು ದಿನಗಳ ವಿಚಕ್ಷಣೆ ಬಳಿಕ ಪೌಲ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎರ್ನಾಕುಲಂ ಗ್ರಾಮಾಂತರ ಪೊಲೀಸರು ಮಾದಕವಸ್ತು ಕಳ್ಳಸಾಗಣೆಗೆ ಸಂಬಂಧಿಸಿದ 750 ಪ್ರಕರಣಗಳನ್ನು ಆರು ತಿಂಗಳ ಅವಧಿಯಲ್ಲಿ ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.