ಚಂಡೀಗಢ: ಇಲ್ಲಿನ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಯ ಸ್ನಾತಕೋತ್ತರ ಸಂಸ್ಥೆಯ ಮೂತ್ರಶಾಸ್ತ್ರ ವಿಭಾಗವು ಮೊದಲ ಬಾರಿಗೆ ರೋಬೋಟ್ ಸಹಾಯದಿಂದ ಮೂತ್ರಪಿಂಡ ಕಸಿ ಮಾಡಿದೆ.

ಮೂತ್ರಪಿಂಡ ಕಸಿಯಲ್ಲಿ ತೆರೆದ ಶಸ್ತ್ರಚಿಕಿತ್ಸೆಗೆ ಹೋಲಿಸಿದರೆ ರೋಬೋಟಿಕ್ ಶಸ್ತ್ರಚಿಕಿತ್ಸೆಯಲ್ಲಿ ತೊಂದರೆಗಳ ಸಾಧ್ಯತೆ ಕಡಿಮೆಯಾಗಲಿದೆ. ಸ್ಥೂಲಕಾಯದ ರೋಗಿಗಳಿಗೆ ಇದು ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಮೂತ್ರಶಾಸ್ತ್ರ ವಿಭಾಗವು 2015ರಿಂದ ರೋಬೋಟಿಕ್ ಶಸ್ತ್ರಚಿಕಿತ್ಸೆ ಅಧ್ಯಯನ ನಡೆಸುತ್ತಿದೆ.

ರೋಬೋಟಿಕ್ ಶಸ್ತ್ರಚಿಕಿತ್ಸೆಯಲ್ಲಿನ ಅನುಭವವು ರೋಬೋಟ್ ಸಹಾಯದಿಂದ ಮೂತ್ರಪಿಂಡ ಕಸಿ ಮಾಡುವ ವಿಧಾನವನನ್ನು ಅನುಸರಿಸುವಂತೆ ಪ್ರೇರೇಪಿಸಿತು ಎಂದು ಮೂತ್ರಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಉತ್ತಮ್ ಮೆಟೆ ತಿಳಿಸಿದ್ದಾರೆ.

ಸಾಮಾನ್ಯವಾಗಿ, ಮೂತ್ರಪಿಂಡ ಕಸಿಯನ್ನು ತೆರೆದ ಶಸ್ತ್ರಚಿಕಿತ್ಸೆ ಮೂಲಕ ನಡೆಸಲಾಗುತ್ತದೆ. ಉದರದ ಛೇದನದ ಶಸ್ತ್ರಚಿಕಿತ್ಸೆ ರೋಗಿಯಿಂದ ರೋಗಿಗೆ, ಆಸ್ಪತ್ರೆಯಿಂದ ಆಸ್ಪತ್ರೆಗೆ, ವೈದ್ಯರಿಂದ ವೈದ್ಯರಿಗೆ ವಿಭಿನ್ನವಾಗಿರುತ್ತದೆ. ಶಸ್ತ್ರ ಚಿಕಿತ್ಸೆ ನಡೆಸುವ ವೇಳೆ ಸೋಂಕು ಹರಡದಂತೆ ತಡೆಯಲು ರೋಬೋಟ್ ವಿಧಾನ ಸಹಾಕಾರಿಯಾಗಿದೆ ಎಂದು ಮೆಟೆ ಹೇಳಿದ್ದಾರೆ.

ಗಾಯದ ಸೋಂಕು ತಡೆಗಟ್ಟಲು ಲ್ಯಾಪರೊಸ್ಕೋಪಿಕ್ ಮತ್ತು ರೋಬೋಟಿಕ್ ನೆರವಿನ ಶಸ್ತ್ರಚಿಕಿತ್ಸೆಗಳು ಸಹಾಯಕ.

ರೋಬೋಟ್ ಕಸಿ ಮಾಡಿಸಿಕೊಂಡ ಇಬ್ಬರೂ ರೋಗಿಗಳು ಉತ್ತಮವಾಗಿ ಇದ್ದಾರೆ ಎಂದು ಮೂತ್ರಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಶಾಂಕಿ ಸಿಂಗ್ ತಿಳಿಸಿದ್ದಾರೆ.

ರೋಬೋಟ್ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸಕ ಡಾ. ರಾಜೇಶ್ ಅಹ್ಲಾವತ್ ಮತ್ತು ಮೇದಾಂತ ಹಾಗೂ ಡಾ ಸುದೀಪ್ ಬೊದ್ದುಲೂರಿ ಅವರು ರೋಬೋಟಿಕ್ ಕಸಿ ಶಸ್ತ್ರಚಿಕಿತ್ಸೆಗೆ ಸಹಾಯ ಮಾಡಿದ್ದಾರೆ.

ಇವನ್ನೂ ಓದಿ: ಪೂಂಛ್ನಲ್ಲಿ ಸೈನಿಕರ ಮೇಲೆ ದಾಳಿ: ಉಗ್ರರಿಗಾಗಿ ತೀವ್ರ ಶೋಧ

Covid-19 India Update| ಇಂದು 11,692 ಹೊಸ ಪ್ರಕರಣ: 28 ಸಾವು

ಗುರುಗ್ರಾಮ| ಮ್ಯಾನ್ಹೋಲ್ನಲ್ಲಿ ಲ್ಯಾಪ್ಟಾಪ್ ಬ್ಯಾಗ್ ಜತೆ ಶವ ಪತ್ತೆ!

ಶೌರ್ಯ ಪ್ರಶಸ್ತಿ ಪಡೆದ ಮೊದಲ ಮಹಿಳೆ: ವಿಂಗ್ ಕಮಾಂಡರ್ ದೀಪಿಕಾ ಮಿಶ್ರಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.