ಕೋಲ್ಕತ್ತ: ಭದ್ರತಾ ಲೋಪ ಪ್ರಕರಣದಲ್ಲಿ ಲಲಿತ್ ಝಾ ಆರೋಪಿಯಾಗಿರುವುದಕ್ಕೆ, ಅವರ ಅಣ್ಣ ಶಂಭು ಝಾ ಆಘಾತಗೊಂಡಿದ್ದಾರೆ.

‘ಇಂತಹ ಕೃತ್ಯದಲ್ಲಿ ಆತ ಹೇಗೆ ಭಾಗಿಯಾದ ಎಂಬುದೇ ನಮಗೆ ತಿಳಿದಿಲ್ಲ. ಆತ ಎಂದೂ ತೊಂದರೆಗೆ ಸಿಲುಕಿದವನಲ್ಲ. ಸಣ್ಣಂದಿನಿಂದಲೇ ಶಾಂತ ಸ್ವಭಾವದನಾಗಿದ್ದನಲ್ಲದೆ, ಅಂತರ್ಮುಖಿಯಾಗಿರುತ್ತಿದ್ದ. ಎನ್ಜಿಒಗೆ ಕೆಲಸ ಮಾಡುತ್ತಿದ್ದ ಎಂಬುದು ನಮಗೆ ಗೊತ್ತಿತ್ತು. ಸುದ್ದಿವಾಹಿನಿಗಳಲ್ಲಿ ಆತನನ್ನು ತೋರಿಸಿದಾಗ ನಮಗೆ ಆಘಾತವಾಯಿತು’ ಎಂದು ಶುಕ್ರವಾರ ಹೇಳಿದ್ದಾರೆ.

‘ಡಿ.10 ರಂದು ಸಿಯಾಲ್ದಯ್ ರೈಲ್ವೆ ನಿಲ್ದಾಣದಲ್ಲಿ ನಾವು ಆತನನ್ನು ಕೊನೆಯದಾಗಿ ಭೇಟಿಯಾಗಿದ್ದೆವು. ಬಿಹಾರದಲ್ಲಿರುವ ಊರಿಗೆ ಹೊರಟಾಗ ನಮ್ಮನ್ನು ಬೀಳ್ಕೊಡಲು ಬಂದಿದ್ದ. ಮರುದಿನ ನಮಗೆ ಕರೆ ಮಾಡಿ, ದೆಹಲಿಗೆ ಹೋಗುವುದಾಗಿ ತಿಳಿಸಿದ್ದ. ಆ ಬಳಿಕ ಆತನ ಜತೆ ಮಾತನಾಡಿಲ್ಲ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.