ನವದೆಹಲಿ: ಜಿ20 ಶೃಂಗಸಭೆಗೆ ಇನ್ನೇನು ಕೆಲವೇ ದಿನಗಳು ಬಾಕಿಯಿದ್ದು, ವಿದೇಶಿ ಗಣ್ಯರನ್ನು ಸ್ವಾಗತಿಸಲು ದೆಹಲಿ ಮಹಾನಗರ ಪಾಲಿಕೆ ಸಕಲ ಸಿದ್ದತೆ ಮಾಡಿಕೊಂಡಿದೆ. ನಗರದಲ್ಲಿ ವಾನರರ ಕಾಟ ಹೆಚ್ಚುತ್ತಿದ್ದು, ಇದೀಗ ಅದಕ್ಕೂ ಒಂದು ಉಪಾಯ ಕಂಡುಕೊಂಡಿದೆ.

ಶೃಂಗಸಭೆ ನಡೆಯಲಿರುವ ಲುಟ್ಯೆನ್ಸ್ ನಗರ ಸೇರಿದಂತೆ ರಾಷ್ಟ್ರ ರಾಜಧಾನಿಯ ಹಲವು ನಗರಗಳಲ್ಲಿ ಕೋತಿಗಳ ಸಂತತಿ ಹೆಚ್ಚುತ್ತಿದೆ. ದಾರಿಹೋಕರ ಮೇಲೆ ಆಕ್ರಮಣ ಮಾಡುವುದು, ಕಚ್ಚುವುದು, ಕಾರುಗಳ ಮೇಲೆ ದಾಳಿ ಮಾಡುವುದು ಇಂತಹ ಹಲವು ಪ್ರಕರಣಗಳು ದಿನನಿತ್ಯ ಕಾಣಬಹುದಾಗಿದೆ.

ಜಿ20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಸೇರಿದಂತೆ ವಿವಿಧ ದೇಶಗಳ ಗಣ್ಯರು ಭಾಗವಹಿಸಲಿದ್ದಾರೆ. ಗಣ್ಯರನ್ನು ಕರೆದೊಯ್ಯುವ ಕಾರುಗಳ ಮೇಲೆ ಕೋತಿಗಳು ದಾಳಿ ಮಾಡುವ ಸಂಭವ ಹೆಚ್ಚಿದ್ದು, ಅತಿಥಿಗಳ ಮುಂದೆ ಮುಜುಗರವಾಗುವುದನ್ನು ತಪ್ಪಿಸಬೇಕಾದ ಅಗತ್ಯ ಈಗ ಪಾಲಿಕೆ ಮೇಲಿದೆ.

ಈ ಸಂಭವವನ್ನು ಅರಿತ ಪಾಲಿಕೆ, ಕೋತಿಗಳ ಉಪಟಳ ನಿಯಂತ್ರಿಸಲು ಹೊಸ ಮಾರ್ಗ ಕಂಡುಹಿಡಿದಿದೆ. ಸರ್ದಾರ್ ಮಾರ್ಗ ಸೇರಿದಂತೆ ಕೋತಿಗಳು ಹೆಚ್ಚಿರುವ ಸುಮಾರು 12 ಕಡೆ ಮುಸಿಯಾಗಳ (Langur) ಕಟೌಟ್‌ಗಳನ್ನು ಇರಿಸಿದೆ. ಅಲ್ಲದೇ ಸುಮಾರು 30ರಿಂದ 40 ಪುರಷರಿಗೆ ‘ಮಂಕಿ ಮೆನ್‘ ತರಬೇತಿ (ಮುಸಿಯಾದಂತೆ ಅನುಕರಣೆ ಮಾಡುವ ಮೂಲಕ ಕೋತಿಗಳನ್ನು ಓಡಿಸುವ ತರಬೇತಿ) ನೀಡಿದೆ.

‘ಕೋತಿಗಳನ್ನು ಅವುಗಳ ನೈಸರ್ಗಿಕ ಆವಾಸಸ್ಥಾನದಿಂದ ಓಡಿಸುವ ಹಕ್ಕು ನಮಗಿಲ್ಲ. ಅವುಗಳಿಂದಾಗುವ ತೊಂದರೆಯನ್ನು ತಡೆಯಬಹುದಷ್ಟೆ. ಹಲವು ಬಗೆಯಲ್ಲಿ ಯೋಚಿಸಿದ ನಂತರ ಎರಡು ಉಪಾಯಗಳನ್ನು ಕಂಡುಕೊಂಡೆವು. ಒಂದು ಮುಸಿಯಾಗಳ ದೊಡ್ಡ ಕಟೌಟ್ ಇಡುವುದು ಮತ್ತೊಂದು ತರಬೇತಿ ಪಡೆದ ‘ಮಂಕಿ ಮೆನ್’ ನಿಯೋಜಿಸುವುದು’ ಎಂದು ಪಾಲಿಕೆಯ ಉಪಾಧ್ಯಕ್ಷ ಸತೀಶ್ ಉಪಾಧ್ಯಾಯ ಸುದ್ದಿಸಂಸ್ಥೆ ಎಎಫ್‌ಪಿಗೆ ಹೇಳಿದ್ದಾರೆ.

‘ಈ ಮಂಕಿ ಮೆನ್‌ಗಳ ಕೆಲಸ ಮುಸಿಯಾಗಳನ್ನು ಅನುಕರಿಸುವುದಾಗಿದೆ. ಅವುಗಳ ಹಾಗೆ ಕೂಗುವುದರ ಮೂಲಕ ಕೋತಿಗಳನ್ನು ಓಡಿಸಬೇಕಾಗಿದೆ. ಇದರಿಂದ ಕೋತಿಗಳನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಬಹುದು. ಅಲ್ಲದೇ ಕೋತಿಗಳು ಆಹಾರ ಹುಡುಕಿಕೊಂಡು ಜನವಸತಿ ಪ್ರದೇಶಗಳಿಗೆ ಬರದಂತೆ ಪರ್ಯಾಯ ವ್ಯವಸ್ಥೆ ಮಾಡಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.