ನವದೆಹಲಿ: ಗಾಜಾದಲ್ಲಿ ಹಮಾಸ್ ಒತ್ತಾಯಾಳಾಗಿರುವ ಇಸ್ರೇಲ್ ನಾಗರಿಕರ ಬಿಡುಗಡೆಗಾಗಿ ಈ ದೀಪಾವಳಿಯಲ್ಲಿ ದೀಪ ಬೆಳಗಿಸಿ ಎಂದು ಭಾರತದಲ್ಲಿರುವ ಇಸ್ರೆಲ್ ರಾಯಭಾರಿ ನೌರ್ ಗಿಲೋನ್ ಅವರು ಭಾರತೀಯರಲ್ಲಿ ಮನವಿ ಮಾಡಿದ್ದಾರೆ.

ದೇಶವು ಹಮಾಸ್ ಉಗ್ರರನ್ನು ನಾಶ ಮಾಡಿದರೆ, ಜನರ ಮೇಲಾಗುವ ಕೆಟ್ಟ ಪರಿಣಾಮವನ್ನು ಕಡಿಮೆ ಮಾಡಬಹುದಾಗಿದೆ ಎಂದು ಹೇಳಿದ್ದಾರೆ.

X ತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಗಿಲೋನ್ ‘ 240 ಜನರನ್ನು ಹಮಾಸ್ ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದೆ. ಪ್ರತಿ ವರ್ಷ ದೀಪಗಳನ್ನು ಬೆಳಗುವುದರಿಂದ ಶ್ರೀ ರಾಮನು ದೀಪಾವಳಿ ಆಚರಣೆಗೆ ಆಗಮಿಸುತ್ತಾರೆ ಎನ್ನುವ ನಂಬಿಕೆಯಿದೆ. ಅದೇ ರೀತಿ ದೀಪ ಬೆಳಗಿಸುವುದರಿಂದ ನಮ್ಮ ಪ್ರೀತಿ ಪಾತ್ರರು ಸುರಕ್ಷಿತವಾಗಿ ಮರಳಬಹುದು’ ಎಂದು ಬರೆದುಕೊಂಡಿದ್ದಾರೆ.

ಗಾಜಾದಲ್ಲಿನ ನಾಗರಿಕರು ದಕ್ಷಿಣದತ್ತ ಸ್ಥಳಾಂತರಗೊಳ್ಳಲು ಇಸ್ರೇಲ್ ವಾರಗಳವರೆಗೆ ಕಾದಿತ್ತು. ಆದರೆ ಹಮಾಸ್ ಉಗ್ರರು ನಾಗರಿಕರನ್ನು ಮಾನವ ಗುರಾಣಿಗಳಾಗಿ ಬಳಸಿಕೊಳ್ಳುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಅವರನ್ನು ಅಡಗಿರಿಸಿಕೊಳ್ಳುತ್ತಿದ್ದಾರೆ. ಅವರ ಮೇಲೆ ಅಂತರರಾಷ್ಟ್ರೀಯ ಒತ್ತಡವಿದೆ ಎಂದು ಗಿಲೋನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.