ಪುಣೆ: ಇಲ್ಲಿನ ಲೋನಾವಲಾ ವಲಯದ ಭುಶಿ ಅಣೆಕಟ್ಟೆ ಸಮೀಪದ ಜಲಪಾತದಲ್ಲಿ ಸೋಮವಾರ ಕೊಚ್ಚಿಹೋಗಿದ್ದ ಐವರ ಶವಗಳು ಪತ್ತೆಯಾಗಿವೆ. ನಾಲ್ಕು ವರ್ಷದ ಬಾಲಕನ ಶವವು ಕಡೆಯದಾಗಿ ಸೋಮವಾರ ಸಂಜೆ ಪತ್ತೆಯಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾನುವಾರ ಮಧ್ಯಾಹ್ನ ಮಹಿಳೆ ಹಾಗೂ ನಾಲ್ವರು ಮಕ್ಕಳು ಜಲಪಾತದಲ್ಲಿ ನೀರಿನ ಸೆಳೆತಕ್ಕೆ ಸಿಕ್ಕು ಕೊಚ್ಚಿಹೋಗಿದ್ದರು. ನಾಲ್ವರ ಶವಗಳು ಭಾನುವಾರ ಸಂಜೆಯೇ ಪತ್ತೆಯಾಯಿತು ಎಂದು ಲೋನಾವಲಾ ಠಾಣೆಯ ಹಿರಿಯ ಇನ್ಸ್ಪೆಕ್ಟರ್ ಸುಹಾಸ್ ಜಗತಾಪ್ ತಿಳಿಸಿದರು. ನೀರಿನ ಸೆಳೆತದಿಂದ ಪಾರಾಗಲು ಮಕ್ಕಳು ಮತ್ತು ಮಹಿಳೆ ಪರಸ್ಪರ ಹಿಡಿದುಕೊಂಡಿದ್ದ ಹಾಗೂ ಬಳಿಕ ನೀರಿನಲ್ಲಿ ಕೊಚ್ಚಿಹೋಗಿದ್ದ ದೃಶ್ಯದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹಂಚಿಕೆಯಾಗಿತ್ತು.

ಮೃತರನ್ನು ಶಹಿಸ್ತಾ ಲಿಯಾಖತ್ ಅನ್ಸಾರಿ (36), ಅಮಿನಾ ಅದಿಲ್ ಅನ್ಸಾರಿ (13), ಉಮೇರಾ ಅದಿಲ್ ಅನ್ಸಾರಿ (8) ಅದ್ನಾನ್ ಅನ್ಸಾರಿ ಮಮ್ತು ಮರಿಯಾ ಅನ್ಸಾರಿ (9) ಎಂದು ಗುರುತಿಸಲಾಗಿದೆ. ಈ ಎಲ್ಲವೂ ಪುಣೆಯ ಹದಪ್ಸರ್ನ ಸಯ್ಯದ್ ನಗರದ ನಿವಾಸಿಗಳು. ‘ಸಂಬಂಧಿಗಳಾದ 16–17 ಜನರು ಜಲಪಾತದ ಬಳಿಗೆ ವಿಹಾರ ಹೋಗಿದ್ದರು. ಧಾರಾಕಾರ ಮಳೆಯ ಕಾರಣ ನೀರಿನ ಹರಿವು ಏಕಾಏಕಿ ಹೆಚ್ಚಾಗಿತ್ತು. ಇದು ಅರಿವಿಗೆ ಬರುವ ವೇಳೆಗೆ ಕೆಲವರು ಜಲಪಾತದ ಮಧ್ಯೆ ಸಿಕ್ಕಿಬಿದ್ದಿದ್ದರು. ಪಾರಾಗುವ ಯತ್ನ ಫಲಿಸಲಿಲ್ಲ. ರಭಸ ಹೆಚ್ಚಾದಂತೆ ಎಲ್ಲರೂ ಕೊಚ್ಚಿಹೋಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.