ನವದೆಹಲಿ: ಕೋವಿಡ್ -19 ಸಾಂಕ್ರಾಮಿಕ ರೋಗದ ಮೊದಲ ಮತ್ತು ಎರಡನೇ ಅಲೆಗಳ ಸಮಯದಲ್ಲಿ ಸೋಂಕಿತರಲ್ಲಿ ಸಾಮಾನ್ಯ ಲಕ್ಷಣಗಳೆಂದು ಗುರುತಿಸಲಾದ ರುಚಿ ಮತ್ತು ವಾಸನೆಯ ನಷ್ಟವು ಕೊರೊನಾದ ಹೊಸ ರೂಪಾಂತರ ತಳಿ ಓಮೈಕ್ರಾನ್ ಪ್ರಕರಣಗಳಲ್ಲಿ ವರದಿಯಾಗುತ್ತಿಲ್ಲ ಎಂದು ವೈದ್ಯಕೀಯ ತಜ್ಞರು ಹೇಳಿದ್ದಾರೆ.

ಆದರೂ,ಓಮೈಕ್ರಾನ್ ರೂಪಾಂತರವನ್ನು ಲಘುವಾಗಿ ಪರಿಗಣಿಸಲಾಗುವುದಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಘ-ಮಹಾರಾಷ್ಟ್ರ ರಾಜ್ಯ (ಐಎಂಎ-ಎಂಎಸ್)ವಿಭಾಗದ ತಜ್ಞರು ಸ್ಪಷ್ಟವಾಗಿ ಹೇಳಿದ್ದಾರೆ. ಸಾಂಕ್ರಾಮಿಕದ ಸಮಯದಲ್ಲಿ, ವೈರಸ್ ತನ್ನ ಗುಣವನ್ನು ಬದಲಾಯಿಸುತ್ತದೆ ಎಂದು ಅವರು ಹೇಳಿದೆ. ‘ನಾವು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಯಾವುದೇ ಆರೋಗ್ಯ ಸಮಸ್ಯೆ ಕಂಡು ಬಂದಾಗ ವೈದ್ಯರನ್ನು ಸಂಪರ್ಕಿಸಬೇಕು ಮತ್ತು ಸ್ವಯಂ-ಔಷಧೋಪಾರದಲ್ಲಿ ತೊಡಗಬಾರದು. ಮಾಸ್ಕ್ ಧರಿಸುವುದು ಮತ್ತು ಕೋವಿಡ್ ಮಾರ್ಗಸೂಚಿ ಪಾಲನೆ ಮಾಡಬೇಕು. ಇದಲ್ಲದೆ, ಲಸಿಕೆ ಪಡೆಯದವರು ಕೂಡಲೇ ಲಸಿಕೆ ತೆಗೆದುಕೊಳ್ಳಬೇಕು’ಎಂದು ಐಎಂಎ-ಎಂಎಸ್ ಅಧ್ಯಕ್ಷ ಡಾ ಸುಹಾಸ್ ಪಿಂಗಳೆ ಶುಕ್ರವಾರ ತಿಳಿಸಿದರು.

ಮೂರನೇ ಅಲೆಯು ಸಾಂಕ್ರಾಮಿಕದ ಮೊದಲ ಮತ್ತು ಎರಡನೆಯ ಅಲೆಗಳಿಗಿಂತ ಭಿನ್ನವಾಗಿದೆ. ಹಾಗಾಗಿ, ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಬಗ್ಗೆ ವಿವರವಾದ ಸಲಹೆ ಸೂಚನೆಯನ್ನು ಬಿಡುಗಡೆ ಮಾಡಿದೆ.

‘ಓಮೈಕ್ರಾನ್ ಕೊರೊನಾ ವೈರಸ್ನ ಹೊಸ ರೂಪಾಂತರವಾಗಿದೆ. ಡೆಲ್ಟಾ ರೂಪಾಂತರದಿಂದಾಗಿ ಎರಡನೇ ತರಂಗವು ಭೀಕರವಾಗಿತ್ತು. ಅದೃಷ್ಟವಶಾತ್, ಓಮೈಕ್ರಾನ್ ಕಂಡುಬಂದಿರುವ ಹೆಚ್ಚಿನ ದೇಶಗಳಲ್ಲಿ, ಈ ವೈರಸ್ ವೇಗವಾಗಿ ಹರಡುವಿಕೆ ಹೊರತಾಗಿಯೂ, ಡೆಲ್ಟಾ ರೂಪಾಂತರಕ್ಕಿಂತ ಸೌಮ್ಯವಾಗಿ ಕಂಡುಬರುತ್ತಿದೆ. ಜ್ವರ, ಗಂಟಲು ನೋವು, ಮೂಗು ಸೋರುವಿಕೆ, ಆಯಾಸ, ಬೆನ್ನುನೋವು, ಮೈ ಕೈ ನೋವು ಮತ್ತು ತಲೆನೋವು ಓಮೈಕ್ರಾನ್ನ ಲಕ್ಷಣಗಳಾಗಿವೆ’ಎಂದು ಸಲಹೆಯಲ್ಲಿ ತಿಳಿಸಲಾಗಿದೆ.

‘ಕೊರೊನಾ ಮೊದಲ ಮತ್ತು ಎರಡನೇ ಅಲೆಯ ಸಂದರ್ಭ ಸೋಂಕಿತರಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿದ್ದ ರುಚಿ ಮತ್ತು ವಾಸನೆಯ ನಷ್ಟವು ಓಮೈಕ್ರಾನ್ ಸೋಂಕಿತರಲ್ಲಿ ಕಂಡುಬರುತ್ತಿಲ್ಲ. ಇದು ಸೌಮ್ಯ ವೈರಸ್ ಎಂದು ತೋರುತ್ತಿದ್ದರೂ ಸಹ ಲಘುವಾಗಿ ಪರಿಗಣಿಸುವಂತಿಲ್ಲ. ಏಕೆಂದರ, ಮುಂದಿನ ದಿನಗಳಲ್ಲಿ ಇದು ತನ್ನ ಸ್ವಭಾವವನ್ನು ಬದಲಿಸಬಹುದು’ಎಂದೂ ತಿಳಿಸಲಾಗಿದೆ.

ಓಮೈಕ್ರಾನ್ ಕೊರೊನಾದ ಹೊಸ ರೂಪಾಂತರ ತಳಿಯಾಗಿದ್ದು, ನವೆಂಬರ್ 24, 2021ರಂದು ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾಗಿತ್ತು.

ಈ ರೂಪಾಂತರವು ವೈರಸ್ ತನ್ನ ಸ್ಪೈಕ್ ಪ್ರೋಟಿನ್ನಲ್ಲಿ 30 ಕ್ಕೂ ಹೆಚ್ಚು ರೂಪಾಂತರಗಳನ್ನು ಪ್ರದರ್ಶಿಸಿದೆ. ಇದು ಪ್ರತಿರಕ್ಷಣಾ ವ್ಯವಸ್ಥೆಯ ಪ್ರಮುಖ ಗುರಿಯಾಗಿದೆ.

‘ಹೊಸ ವೈರಸ್ಗಳು ವಿಕಸನದ ಸಾಮಾನ್ಯ ಭಾಗವಾಗಿದೆ. ಅವು ನಿರಂತರವಾಗಿ ವಿಕಸನಗೊಳ್ಳುತ್ತಲೇ ಇರುತ್ತವೆ. ವಿಕಸನ, ಆನುವಂಶಿಕ ಅನುಕ್ರಮಗಳಲ್ಲಿನ ಬದಲಾವಣೆ ಮತ್ತು ರೂಪಾಂತರ, ವೈರಸ್ಗಳ ನೈಸರ್ಗಿಕ ಮತ್ತು ಸಾಮಾನ್ಯ ಸ್ವಭಾವವಾಗಿದೆ. ಇದಲ್ಲದೆ, ಎಲ್ಲಾ ರೂಪಾಂತರಗಳು ಅಪಾಯಕಾರಿ ಅಲ್ಲ. ಹಾಗಾಗಿ, ನಾವು ಅವುಗಳನ್ನು ಹೆಚ್ಚಾಗಿ ಗಮನಿಸುವುದಿಲ್ಲ. ಅವು ಹೆಚ್ಚು ಸಾಂಕ್ರಾಮಿಕವಾಗಿದ್ದಾಗ ಅಥವಾ ಜನರನ್ನು ಮರುಸೋಂಕಿಸಿದಾಗ ಮಾತ್ರ ಅವುಗಳ ಬಗ್ಗೆ ಗಮನಿಸುತ್ತೇವೆ. ರೂಪಾಂತರ ವೈರಸ್ಗಳ ಅಭಿವೃದ್ಧಿಯನ್ನು ತಪ್ಪಿಸುವ ಪ್ರಮುಖ ಹಂತವೆಂದರೆ ಸೋಂಕಿನ ಸಂಖ್ಯೆಯನ್ನು ಕಡಿಮೆ ಮಾಡುವುದು. ಆದ್ದರಿಂದ, ಪ್ರತಿಯೊಬ್ಬರೂ ಕಾಳಜಿ ವಹಿಸುವುದು, ತಮ್ಮನ್ನು ತಾವು ರಕ್ಷಿಸಿಕೊಳ್ಳುವುದು ಪ್ರಸ್ತುತ ಮತ್ತು ಭವಿಷ್ಯಕ್ಕಾಗಿ ಅತ್ಯಗತ್ಯವಾಗಿರುತ್ತದೆ’ ಎಂದು ವೈದ್ಯಕೀಯ ಪರಿಣಿತರು ತಿಳಿಸಿದ್ದಾರೆ..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.