ಕಡಪ (ಆಂಧ್ರಪ್ರದೇಶ): ಆಂಧ್ರಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ವೈ.ಎಸ್ ಶರ್ಮಿಳಾ ಅವರು ಕಡಪ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಶನಿವಾರ ನಾಮಪತ್ರ ಸಲ್ಲಿಸಿದರು. ಅವರಿಗೆ ಸುನೀತಾ ನಾರಾರೆಡ್ಡಿ ಹಾಗೂ ಸೋದರ ಸಂಬಂಧಿ, 2016ರ ಚುನಾವಣೆ ವೇಳೆ ಕೊಲೆಗೀಡಾದ ವೈ.ಎಸ್ ವಿವೇಕಾನಂದ ರೆಡ್ಡಿ ಅವರ ಪುತ್ರಿ ಸಾಥ್ ನೀಡಿದರು.
.114 ವಿಧಾನಸಭಾ ಕ್ಷೇತ್ರಗಳಿಗೆ ‘ಕೈ’ಅಭ್ಯರ್ಥಿಗಳ ಪ್ರಕಟ: ಕಡಪದಿಂದ ಶರ್ಮಿಳಾ ಕಣಕ್ಕೆ.
‘ಕಡಪ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ. ಕಡಪದ ಜನರು ವೈ.ಎಸ್ ರಾಜಶೇಖರ ರೆಡ್ಡಿ ಹಾಗೂ ವಿವೇಕಾನಂದ ಅವರನ್ನು ಮರೆತಿಲ್ಲ. ಅವರನ್ನು ನೆನಪಿನಲ್ಲಿಟ್ಟುಕೊಂಡು ಈ ಬಾರಿ ಜನ ಮತ ಚಲಾಯಿಸಲಿದ್ದಾರೆ’ ಎಂದು ಶರ್ಮಿಳಾ ಹೇಳಿದರು.

ನಾಮಪತ್ರ ಸಲ್ಲಿಕೆಗೂ ಮುನ್ನ ಇಡುಪುಲಪಾಯದಲ್ಲಿರುವ ತಂದೆ ರಾಜಶೇಖರ ರೆಡ್ಡಿ ಅವರ ಸಮಾಧಿಗೆ ತೆರೆಳಿ ಪೂಜೆ ಸಲ್ಲಿಸಿದರು.
.ಗೃಹಬಂಧನ ಭೀತಿ: ಕಾಂಗ್ರೆಸ್ ಕಚೇರಿಯಲ್ಲಿಯೇ ಮಲಗಿದ ಶರ್ಮಿಳಾ ರೆಡ್ಡಿ.
ಕಡಪದಲ್ಲಿ ತಮ್ಮ ಹಿರಿಯ ಸಹೋದರ ಜಗನ್‌ಮೋಹನ್ ರೆಡ್ಡಿ ಅವರ ವೈಎಸ್‌ಆರ್‌ಸಿಪಿ ಪಕ್ಷದ ಅಭ್ಯರ್ಥಿಯನ್ನು ಶರ್ಮಿಳಾ ಎದುರಿಸಲಿದ್ದಾರೆ. ಸೋದರ ಸಂಬಂಧಿ ವೈ.ಎಸ್ ಅವಿನಾಶ್ ರೆಡ್ಡಿ ಎದುರಾಳಿಯಾಗಿದ್ದಾರೆ.

ಆಂಧ್ರದ 25 ಲೋಕಸಭಾ ಕ್ಷೇತ್ರಗಳಿಗೆ ಮೇ 13ರಂದು ಮತದಾನ ನಡೆಯಲಿದೆ.
.ಜೀವ ಬೆದರಿಕೆ: ವೈ.ಎಸ್. ಶರ್ಮಿಳಾ ಬೆನ್ನಿಗೆ ನಿಂತ ರಾಹುಲ್ ಗಾಂಧಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.