ಜೈಪುರ: ಲೋಕಸಭಾ ಚುನಾವಣೆ ಘೊಷಣೆಯಾದ ಬೆನ್ನಲ್ಲೇ ಜಾರಿಗೆ ಬಂದಿರುವ ಮಾದರಿ ನೀತಿ ಸಂಹಿತೆ ಅವಧಿಯಲ್ಲಿ ಮಾದಕದ್ರವ್ಯ, ಮದ್ಯ, ಬೆಲೆಬಾಳುವ ಲೋಹ ಹಾಗೂ ನಗದು ಸೇರಿ ಒಟ್ಟು ₹17 ಕೋಟಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ರಾಜಸ್ಥಾನದ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಚುನಾವಣೆ ಘೋಷಣೆಯಾದ ದಿನದಿಂದಲೇ ಜಾರಿಗೆ ಬಂದ ಮಾದರಿ ನೀತಿ ಸಂಹಿತೆ ಅಡಿಯಲ್ಲಿ ಮಾರ್ಚ್ 16ರಿಂದ ಇಷ್ಟು ದೊಡ್ಡ ಮೊತ್ತದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ರಾಜ್ಯ ಪೊಲೀಸ್, ಅಬಕಾರಿ ಇಲಾಖೆ, ನಾರ್ಕೊಟಿಕ್ಸ್ ಇಲಾಖೆ ಮತ್ತು ಆದಾಯ ತರಿಗೆ ಇಲಾಖೆ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ.

‘ಮಾರ್ಚ್ ತಿಂಗಳ ಆರಂಭದಿಂದ ಇಲ್ಲಿಯವರೆಗೆ ಸುಮಾರು ₹115 ಕೋಟಿ ಮೊತ್ತದ ಮಾದಕದ್ರವ್ಯ, ಮದ್ಯ, ಬೆಲೆಬಾಳುವ ಲೋಹ ಮತ್ತು ದಾಖಲೆ ಇಲ್ಲದೆ ಸಾಗಿಸುತ್ತಿದ್ದ ನಗದು ವಶಪಡಿಸಿಕೊಳ್ಳಲಾಗಿದೆ’ ಎಂದು ರಾಜಸ್ಥಾನ ಮುಖ್ಯ ಚುನಾವಣಾಧಿಕಾರಿ ಪ್ರವೀಣ ಗುಪ್ತಾ ತಿಳಿಸಿದ್ದಾರೆ.

ಇದರಲ್ಲಿ ₹2.41 ಕೋಟಿಯಷ್ಟು ನಗದು, ₹51.56 ಕೋಟಿ ಮಾದಕ ದ್ರವ್ಯ, ₹6.71 ಕೋಟಿ ಮೌಲ್ಯದ ಮದ್ಯ ವಶಕ್ಕೆ ಪಡೆಯಲಾಗಿದೆ. ಉಳಿದವುಗಳಲ್ಲಿ ಬಂಗಾರ ಹಾಗೂ ಇತರ ಬೆಲೆಬಾಳುವ ವಸ್ತುಗಳು ಸೇರಿವೆ. ಇದರಲ್ಲಿ ಜೋಧಪುರದಲ್ಲೇ ಅತ್ಯಧಿಕ ₹18.70 ಕೋಟಿ ಮೊತ್ತದ ವಸ್ತುವನ್ನು ವಶಕ್ಕೆ ಪಡೆಯಲಾಗಿದೆ.

ರಾಜಸ್ಥಾನದ 25 ಲೋಕಸಭಾ ಕ್ಷೇತ್ರಗಳಿಗೆ ಏ. 19 ಹಾಗೂ ಏ. 26ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.