ಮುಂಬೈ: ಮಹಾರಾಷ್ಟ್ರದಲ್ಲಿ ಈಗ ವಿಧಾನಸಭೆ ಚುನಾವಣೆ ಪ್ರಚಾರದ ಅಬ್ಬರ ತಾರಕಕ್ಕೇರಿದೆ. ಅಲ್ಲೀಗ ಟೀಕೆಗಳದ್ದೇ ಪಾರುಪತ್ಯ. ಅಧಿಕಾರಕ್ಕಾಗಿ ಹಣಾಹಣಿ ನಡೆಸುತ್ತಿರುವ ಮಹಾಯುತಿ ಮತ್ತು ಮಹಾವಿಕಾಸ ಆಘಾಡಿ (ಎಂವಿಎ) ಮೈತ್ರಿಕೂಟಗಳು ಈಗ ಟೀಕೆಗಳನ್ನು ಮೊಳಗಿಸುವುದರಲ್ಲಿಯೂ ಸ್ಪರ್ಧೆಗೆ ಬಿದ್ದಿವೆ.

‘ಸಂವಿಧಾನ ಉಳಿಸಿ’, ‘ಏಕ್ ಹೈ ತೊ ಸೇಫ್ ಹೈ’(ಒಟ್ಟಾಗಿದ್ದರೆ ಸುರಕ್ಷೆ), ‘ಬಟೇಂಗೆ ತೋ ಕಾಟೇಂಗೆ’ (ಒಗ್ಗಟ್ಟು ಇಲ್ಲದಿರುವುದು ವಿನಾಶಕ್ಕೆ ಕಾರಣ), ‘ನಫ್ರತ್ ಕೆ ಬಜಾರ್ ಮೇ ಮೊಹಬ್ಬತ್ ಕಿ ದುಖಾನ್’ (ದ್ವೇಷದ ಬಜಾರಿನಲ್ಲಿ ಪ್ರೀತಿಯ ಅಂಗಡಿ), ‘ಪಾಕಿಸ್ತಾನಿ ಅಜೆಂಡಾ’, ‘ಕರೆಕ್ಟ್ ಕಾರ್ಯಕ್ರಮ್’, ‘ವೋಟ್ ಜಿಹಾದ್’, ‘ಧರ್ಮಯುದ್ಧ್’, ‘ಗದ್ದಾರ್’, ‘ಭೋಂಗೆ ಬಂದ್ ಕರಾ’ (ಸುಳ್ಳು ಹೇಳುವುದನ್ನು ನಿಲ್ಲಿಸಿ), ‘ಝೂಟೋಂ ಕಾ ಸರ್ದಾರ್’ (ಸುಳ್ಳುಗಳ ಸರದಾರ)...

ಇವು, ಪ್ರಚಾರದ ಅಂಗಳದಲ್ಲಿ ಕೇಳಿಬರುತ್ತಿರುವ ಪ್ರಮುಖ ಘೋಷಣೆಗಳು, ವಾಗ್ಯುದ್ಧಕ್ಕೆ ಬಳಸಲಾಗುತ್ತಿರುವ ಮಾತುಗಳು. ನವೆಂಬರ್ 20ರಂದು ಚುನಾವಣೆ ನಡೆಯಲಿದೆ. ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಯಲ್ಲಿ ಏಕನಾಥ ಶಿಂದೆ ನೇತೃತ್ವದ ಶಿವಸೇನಾ, ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ಇವೆ. ಹಾಗೆಯೇ, ಕಾಂಗ್ರೆಸ್ ನೇತೃತ್ವದ ಎಂವಿಎ ಮೈತ್ರಿಕೂಟಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ, ಶರದ್ ಪವಾರ್ ನೇತೃತ್ವದ ಎನ್ಸಿಪಿ ಇವೆ.

ಕಾಂಗ್ರೆಸ್ ಪಕ್ಷವು ‘ಸಂವಿಧಾನ ಉಳಿಸಿ’, ’ಮೀಸಲಾತಿ ಉಳಿಸಿ’ ಘೋಷಣೆಗಳಿಗೆ ಹೆಚ್ಚು ಒತ್ತು ನೀಡಿದೆ. ಈ ಮೂಲಕ ರಾಹುಲ್ ಗಾಂಧಿ ನೇತೃತ್ವದಲ್ಲಿ ದಲಿತ, ಮುಸ್ಲಿಂ ವೋಟುಗಳತ್ತ ಪಕ್ಷ ಕಣ್ಣಿಟ್ಟಿದೆ. ಇನ್ನೊಂದೆಡೆ, ಪ್ರಧಾನಿ ನರೇಂದ್ರ ಮೋದಿ ಅವರ ‘ಏಕ್ ಹೈ ತೋ ಸೇಫ್ ಹೈ’ ಎಂಬ ಘೋಷಣೆಯನ್ನು ಬಿಜೆಪಿ ನೆಚ್ಚಿಕೊಂಡಿದೆ. ಇದರ ಜೊತೆಗೆ ಅಮಿತ್ ಶಾ ಅವರ ‘ಮುಸ್ಲಿಂ ಕೋಟಾ ಇಲ್ಲ’ ಮತ್ತು ಯೋಗಿ ಆದಿತ್ಯನಾಥ ಅವರ ‘ಬಟೇಂಗೆ ತೋ ಕಾಟೇಂಗೆ’ ಘೋಷಣೆಗಳು ಚರ್ಚೆಗೆ ಗ್ರಾಸವಾಗಿವೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮೋದಿ ಅವರನ್ನು ‘ಝೂಟೋಂ ಕಾ ಸರ್ದಾರ್’ ಎಂದು ಕರೆದಿದ್ದು, ‘ಭಾಯಿಯೊ ಔರ್ ಬೆಹನೊ...’ ಎಂದು ಕಳೆದ 10 ವರ್ಷಗಳಿಂದ ಅವರು ನೀಡಿದ ಘೋಷಣೆಗಳು ಸಾಕಾರಗೊಂಡಿಲ್ಲ ಎಂದು ಟೀಕಿಸಿದ್ದಾರೆ.

ಶಿವಸೇನಾದ ವಿಭಜನೆಯನ್ನು ಸಮರ್ಥಿಸಿಕೊಳ್ಳುತ್ತಾ ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರು, ‘ಕರೆಕ್ಟ್ ಕಾರ್ಯಕ್ರಮ್ ಕಿಯಾ’ ಎಂದು ಹೇಳಿದರೆ, ಪ್ರತಿಯಾಗಿ ಮತ್ತೊಂದು ಬಣದ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಅವರ ಪುತ್ರ ಆದಿತ್ಯ ಠಾಕ್ರೆ ಅವರು ‘ಪನ್ನಾಸ್ ಖೋಕೆ’ ಎಂಬ ವ್ಯಾಖ್ಯಾನವನ್ನು ಬಳಸುತ್ತಿದ್ದಾರೆ.

ಮೋದಿ –ಶಾ ಅವರು ‘ಔರಂಗ್ಜೇಬ್ ಫ್ಯಾನ್ ಕ್ಲಬ್’ ಎಂದು ಬಣ್ಣಿಸಿರುವುದಕ್ಕೆ ಪ್ರತಿಯಾಗಿ, ಉದ್ಧವ್ ಠಾಕ್ರೆ ಅವರು ‘ಜಿನ್ನಾ ಫ್ಯಾನ್ ಕ್ಲಬ್‘ ಎಂದು ತಿರುಗೇಟು ನೀಡಿದ್ದಾರೆ.

ಪ್ರಚಾರದ ಅಬ್ಬರ ಹೆಚ್ಚಿದಂತೆ ಹೊಸ ಹೊಸ ಘೋಷಣೆಗಳು ಕೇಳಿಬರುತ್ತಿವೆ. ಘೋಷಣೆ, ಟೀಕೆ ಮಾಡುವುದರಲ್ಲೂ ಹೊಸ ಸ್ಪರ್ಧೆ ಏರ್ಪಟ್ಟಂತಿದೆ. ಈ ಪಟ್ಟಿಗೆ ಹೊಸ ಸೇರ್ಪಡೆ ಎಂಬಂತೆ ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷ ನಾನಾ ಪಟೋಲೆ ಅವರು, ‘ಬಿಜೆಪಿಯನ್ನು ನಾಯಿಯಾಗಿಸುವ ಕಾಲ ಬಂದಿದೆ’ ಎಂದು ಟೀಕಿಸಿದ್ದಾರೆ. ಇದಕ್ಕೆ ತೀವ್ರ ಟೀಕೆ ವ್ಯಕ್ತವಾಗಿದ್ದು, ಬಿಸಿ ಬಿಸಿ ಚರ್ಚೆ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.