ಮುಂಬೈ: ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜರಾಂಗೆ ಪಾಟೀಲ ಅವರು ನೀಡುತ್ತಿರುವ ಹೇಳಿಕೆಗಳು ಮತ್ತು ರಾಜಕೀಯ ನಂಟಿನ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಮರಾಠ ಮೀಸಲಾತಿ ಹೋರಾಟಕ್ಕೆ ಸಂಬಂಧಿಸಿ ಮನೋಜ್ ಜರಾಂಗೆ ಅವರಿಗೆ ರಾಜಕೀಯ ಪಕ್ಷಗಳು ಹಣ ನೀಡುತ್ತಿದ್ದು, ಪ್ರಚಾರದ ವೇಳೆ ಅವರು ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಆರೋಪದ ಬೆನ್ನಲ್ಲೇ ಮರಾಠ ಸಮುದಾಯದ ಮುಖಂಡರು ನಾಗ್ಪುರದಲ್ಲಿ ಮನೋಜ್ ಜರಾಂಗೆ ಅವರ ಪ್ರತಿಕೃತಿಯನ್ನು ಸುಟ್ಟುಹಾಕಿ ಪ್ರತಿಭಟನೆ ನಡೆಸಿದ್ದಾರೆ ಎಂದು ‘ಪಿಟಿಐ’ ವರದಿ ಮಾಡಿದೆ.

ಜರಾಂಗೆ ವಿರುದ್ಧ ಪ್ರಕರಣ

ಮನೋಜ್ ಜಾರಂಗೆ ಅವರು ಬೀಡ್ ನಗರದ 25 ಸ್ಥಳಗಳಲ್ಲಿ ರಸ್ತೆ ತಡೆ ನಡೆಸಲು ಜನರನ್ನು ಪ್ರಚೋದಿಸಿದ್ದಾರೆ. ಇದರಿಂದಾಗಿ ಭಾರಿ ಸಂಚಾರ ದಟ್ಟಣೆ ಉಂಟಾಗಿ ಜನರು ತೊಂದರೆ ಅನುಭವಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜರಾಂಗೆ ವಿರುದ್ಧ ಐಪಿಸಿ ಸೆಕ್ಷನ್ 341, 143, 145, 149, 188 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ನಂದಕುಮಾರ್ ಠಾಕೂರ್ ತಿಳಿಸಿದ್ದಾರೆ.
.ಪ್ರಚೋದನೆ ಆರೋಪ: ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜರಾಂಗೆ ವಿರುದ್ಧ ಪ್ರಕರಣ.ನನ್ನನ್ನು ಮುಗಿಸಲು ಫಡಣವೀಸ್ ಯತ್ನ: ಮರಾಠ ಮೀಸಲಾತಿ ಹೋರಾಟಗಾರ ಜಾರಂಗೆ ಆರೋಪ.ಮರಾಠಾ ಮೀಸಲಾತಿ ಮಸೂದೆ ಅಂಗೀಕಾರ: ಧರಣಿ ಕೈಬಿಡಲು ಮನೋಜ್ ಜಾರಂಗೆ ನಿರಾಕರಣೆ.ಮೀಸಲಾತಿ ನಿರಾಕರಿಸಿದರೆ ಮರಾಠರು ಸುಮ್ಮನೆ ಕೂರರು: ಮನೋಜ್ ಜಾರಂಗೆ ಎಚ್ಚರಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.