ಲಾತೂರ್: ಮಹಾರಾಷ್ಟ್ರದ ಬೀಡ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪಂಕಜಾ ಮುಂಡೆ ಅವರು ಸೋತರೆ ನಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಡಿಯೊ ಮಾಡಿದ್ದ ಟ್ರಕ್ ಚಾಲಕನೊಬ್ಬ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಮೃತ ವ್ಯಕ್ತಿಯನ್ನು ಲಾತೂರ್ನ ಅಹ್ಮದ್ಪುರದ ನಿವಾಸಿ 38 ವರ್ಷದ ಸಚಿನ್ ಕೊಂಡಿಬಾ ಮುಂಡೆ ಎಂದು ಗುರುತಿಸಲಾಗಿದೆ. ಬೋರಗಾಂವ್ ಪಾಟಿ ಬಳಿಯ ಅಹ್ಮದ್ಪುರ-ಅಂಧೋರಿ ಹೆದ್ದಾರಿಯಲ್ಲಿ ಸಂಭವಿಸಿದ ಬಸ್ ಅಪಘಾತದಲ್ಲಿ ಈತ ಮೃತಪಟ್ಟಿದ್ದಾನೆ ಎಂದು ಕಿಂಗಾವ್ ಪೊಲೀಸ್ ಇನ್ಸ್ಪೆಕ್ಟರ್ ಬಹುಸಾಹೇಬ್ ಖಂಡಾರೆ ತಿಳಿಸಿದ್ದಾರೆ.

‘ಬಸ್ ಅನ್ನು ವಶಕ್ಕೆ ಪಡೆದು ಚಾಲಕನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಅಪಘಾತವೇ ಅಥವಾ ಆತ್ಮಹತ್ಯೆಯೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ’ ಎಂದು ಅವರು ಹೇಳಿದ್ದಾರೆ.

ಬೀಡ್ ಲೋಕಸಭಾ ಕ್ಷೇತ್ರದಲ್ಲಿ ಪಂಕಜಾ ಮುಂಡೆ ಅವರು ಸೋತರೆ ನಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಡಿಯೊ ಮಾಡಿದ್ದ ಸಚಿನ್, ಬಸ್ನಡಿ ಸಿಲುಕಿ ಮೃತಪಟ್ಟಿದ್ದಾನೆ. ಆದರೆ, ಆತ್ಮಹತ್ಯೆ ಇರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಪಂಕಜಾ ಮುಂಡೆ ಅವರು ‘ಇಂಡಿಯಾ’ ಬಣದ ಅಭ್ಯರ್ಥಿ ಭಜರಂಗ್ ಮನೋಹರ್ ಸೋನವಣೆ ವಿರುದ್ಧ 6,553 ಮತಗಳಿಂದ ಸೋಲು ಕಂಡಿದ್ದಾರೆ.
.ಅನಾರೋಗ್ಯ ಕಾರಣ ಮೋದಿ ಪ್ರಮಾಣವಚನ ಸಮಾರಂಭದಲ್ಲಿ ಭಾಗಿಯಾಗುತ್ತಿಲ್ಲ: ಎಚ್ಡಿಡಿ.Modi 3.0: ಇದೇ ಮೊದಲ ಬಾರಿಗೆ ತೃತೀಯಲಿಂಗಿಗಳಿಗೆ ಆಹ್ವಾನ, ಸರ್ಕಾರಕ್ಕೆ ಆಶೀರ್ವಾದ.ಸೋಲಿನ ಹೊಣೆ ಹೊರಲಿಲ್ಲ: ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಕಾಲೆಳೆದ ಸೋನಿಯಾ ಗಾಂಧಿ.ಚುನಾವಣೆಯಲ್ಲಿ ಸೋಲು: ನವೀನ್ ಪಟ್ನಾಯಕ್ ಆಪ್ತ ಪಾಂಡಿಯನ್ ರಾಜಕೀಯದಿಂದ ನಿವೃತ್ತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.