ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುಕಿ ಸಮುದಾಯದವರ ಬಂಧನ ಖಂಡಿಸಿ ಬಂದ್: ಮಣಿಪುರದ ನಾಲ್ಕು ಜಿಲ್ಲೆಗಳು ಸ್ತಬ್ದ

Published : 10 ಜುಲೈ 2024, 14:34 IST
Last Updated : 10 ಜುಲೈ 2024, 14:34 IST
ಫಾಲೋ ಮಾಡಿ
Comments

ಇಂಫಾಲ್ (ಚುರ್‌ಚಾಂದ್‌ಪುರ): ಕುಕಿ ಸಮುದಾಯಕ್ಕೆ ಸೇರಿದ ನಾಲ್ವರನ್ನು ಬಂಧಿಸಿರುವುದನ್ನು ಖಂಡಿಸಿ ಬುಧವಾರ 12 ಗಂಟೆ ನಡೆದ ಬಂದ್‌ನಿಂದಾಗಿ ಮಣಿಪುರದ ನಾಲ್ಕು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತ್ತು.

‘ಚುರ್‌ಚಾಂದ್‌ಪುರ, ಕಾಂಗ್ಪೊಕ್ಪಿ, ಫೆರ್ಝಾವಾಲ್ ಮತ್ತು ತೆಂಗ್‌ನೌಪಲ್ ಜಿಲ್ಲೆಗಳಲ್ಲಿ ಮಾರುಕಟ್ಟೆಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬ್ಯಾಂಕ್‌ಗಳು ಬಾಗಿಲು ತೆರೆಯಲಿಲ್ಲ. ಸರ್ಕಾರಿ ಕಚೇರಿಗಳಲ್ಲೂ ಕಡಿಮೆ ಹಾಜರಾತಿ ಇತ್ತು’ ಎಂದು ಅಧಿಕೃತ ಮೂಲಗಳು ತಿಳಿಸಿವೆ. 

ಚುರ್‌ಚಾಂದ್‌ಪುರ, ಕಾಂಗ್ಪೊಕ್ಪಿಗಳಲ್ಲಿ ಬಿಗಿ ಬಂದೋಬಸ್ತ್‌ ನಡೆಸಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. 

ಭದ್ರತೆಯ ದೃಷ್ಟಿಯಿಂದ ಜಿರಿಬಾಮ್‌ನ ಇಬ್ಬರನ್ನು ಮತ್ತು ಕಾಂಗ್ಪೊಕ್ಪಿಯ ಮೂವರನ್ನು ಪೊಲೀಸರು ಬಂಧಿಸಿದ್ದರು. ಈ ಬಗ್ಗೆ ಕುಕಿ ಸಮುದಾಯ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಕಳೆದ ವರ್ಷ ಮೇ ತಿಂಗಳಿನಿಂದ ಮಣಿಪುರದಲ್ಲಿ ನಡೆದ ಜನಾಂಗೀಯ ಹಿಂಸಾಚಾರದಿಂದ 200ಕ್ಕೂ ಅಧಿಕ ಜನ ಮೃತಪಟ್ಟಿದ್ದು, ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT