ಚುರಾಚಾಂದಪುರ: ಕುಕಿ–ಜೋ ಗುಂಪುಗಳೊಂದಿಗೆ ‘ಕಾರ್ಯಾಚರಣೆ ಸ್ಥಗಿತಗೊಳಿಸುವ’ (ಎಸ್ಒಒ) ಒಪ್ಪಂದವನ್ನು ರದ್ದುಗೊಳಿಸುವಂತೆ ಕೇಂದ್ರವನ್ನು ಒತ್ತಾಯಿಸುವ ಕುರಿತು ವಿಧಾನಸಭೆಯು ಅಂಗೀಕರಿಸಿರುವ ನಿರ್ಣಯವನ್ನು ಮಣಿಪುರದ ಹತ್ತು ಮಂದಿ ಬುಡಕಟ್ಟು ಶಾಸಕರು ಖಂಡಿಸಿದ್ದಾರೆ. ಇದೊಂದು ‘ಪಕ್ಷಪಾತ’ ಧೋರಣೆಯ ನಿರ್ಣಯ ಎಂದು ಅವರು ದೂರಿದ್ದಾರೆ.

‘ಇದು ಪೂರ್ವಗ್ರಹಗಳಿಂದ ಕೂಡಿದ ಏಕಪಕ್ಷೀಯ ನಿರ್ಣಯ. ಇದು ನಮ್ಮ ಸಮುದಾಯದ ವಿರುದ್ಧ ಪಕ್ಷಪಾತಿ ಧೋರಣೆ ಮತ್ತು ದ್ವೇಷವನ್ನು ಹೊಂದಿದೆ’ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಶಾಸಕರ ಪೈಕಿ ಏಳು ಮಂದಿ ಆಡಳಿತಾರೂಢ ಬಿಜೆಪಿಯವರು, ಇಬ್ಬರು ಕುಕಿ ಪೀಪಲ್ಸ್ ಅಲಯನ್ಸ್ನವರು (ಕೆಪಿಎ), ಒಬ್ಬರು ಪಕ್ಷೇತರರಾಗಿದ್ದಾರೆ.

ಕಳೆದ ಮೇ ತಿಂಗಳಿನಿಂದ ಮಣಿಪುರದಲ್ಲಿ ನಡೆಯುತ್ತಿರುವ ಸಂಘರ್ಷದಲ್ಲಿ ಕನಿಷ್ಠ 219 ಮಂದಿ ಮೃತಪಟ್ಟಿದ್ದಾರೆ.

2008ರಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ನಂತರದಲ್ಲಿ ಒಪ್ಪಂದ ಅವಧಿಯನ್ನು ಕಾಲಕಾಲಕ್ಕೆ ವಿಸ್ತರಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.