ಛತ್ರಪತಿ ಸಂಭಾಜಿನಗರ: ‘ಮರಾಠ ಸಮುದಾಯದ ಮೀಸಲಾತಿಗೆ ಒತ್ತಾಯಿಸಿ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುವ ದಿನವಾದ ಜೂನ್ 4ರಿಂದ ಮತ್ತೆ ಹೋರಾಟ ಆರಂಭಿಸಲಾಗುವುದು’ ಎಂದು ಮೀಸಲಾತಿ ಹೋರಾಟಗಾರ ಮನೋಜ್ ಜರಾಂಗೆ ಮಂಗಳವಾರ ಎಚ್ಚರಿಕೆ ನೀಡಿದ್ದಾರೆ.

‘ಜೂನ್ 4ರ ಬೆಳಿಗ್ಗೆ 9 ಹಂಟೆಗೆ ಅನಿರ್ದಿಷ್ಟಾವಧಿ ನಿರಶನದೊಂದಿಗೆ ಪ್ರತಿಭಟನೆ ಆರಂಭಿಸುತ್ತೇವೆ. ಈ ಪ್ರತಿಭಟನೆಯು ಶಾಂತಿಯುತವಾಗಿರಲಿದೆ. ಆದರೆ, ಅದಕ್ಕೂ ಮುಂಚಿತವಾಗಿಯೇ ಸರ್ಕಾರ ಕ್ರಮ ಕೈಗೊಳ್ಳಲಿದೆ’ ಎಂದು ಭರವಸೆ ವ್ಯಕ್ತಪಡಿಸಿದರು.

ಛತ್ರಪತಿ ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಜರಾಂಗೆ, ‘ಶಿಕ್ಷಣ ಸಂಸ್ಥೆಗಳಲ್ಲಿ ದಾಖಲಾತಿ, ಸರ್ಕಾರಿ ಕೆಲಸಗಳಿಗೆ ನೇಮಕಾತಿಯಲ್ಲಿ ಮರಾಠ ಸಮುದಾಯಕ್ಕೆ ಮೀಸಲಾತಿ ನೀಡಲು ಒತ್ತಾಯಿಸಿ ಜೂನ್ 8ರಂದು ರ‍್ಯಾಲಿ ಆಯೋಜಿಸಲಾಗುವುದು. ನಮ್ಮ ಮಕ್ಕಳ ಭವಿಷ್ಯಕ್ಕಾಗಿ ನಮಗೆ ಮೀಸಲಾತಿ ಬೇಕಿದೆ. ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅಡಿಯಲ್ಲಿ ನಮಗೆ ಶೇ 10 ಮೀಸಲಾತಿ ಕಲ್ಪಿಸಲಾಗಿದೆ. ಆದರೆ, ಇದು ಪ್ರಯೋಜನವೇ ಇಲ್ಲ ಎಂಬುದು ಈಗಾಗಲೇ ನಡೆಯುತ್ತಿರುವ ಪೊಲೀಸ್ ನೇಮಕಾತಿಯಲ್ಲಿ ಸಾಬೀತಾಗಿದೆ’ ಎಂದರು.

ಲೋಕಸಭಾ ಚುನಾವಣೆ ಮೇಲೆ ಮರಾಠ ಮೀಸಲಾತಿಯ ಪರಿಣಾಮದ ಕುರಿತು ಪ್ರತಿಕ್ರಿಯಿಸಿದ ಅವರು, ‘ಈ ಚುನಾವಣೆಯಲ್ಲಿ ನಾನು ಸಕ್ರಿಯನಾಗಿರಲಿಲ್ಲ. ಜೊತೆಗೆ ಯಾರ ಪರವಾಗಿಯೂ ನಾನು ಪ್ರಚಾರ ಮಾಡಿಲ್ಲ. ಆದರೆ, ನಮ್ಮ ವಿರುದ್ಧ ಇರುವವರನ್ನು ಸೋಲಿಸಬೇಕು ಎಂಬುದಾಗಿ ಹೇಳಿದ್ದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.