ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿನ ಗಾಳಿಯ ಗುಣಮಟ್ಟವು ಮಂಗಳವಾರ ಮುಂಜಾನೆ 'ಅತಿ ಕಳಪೆ' ಮಟ್ಟಕ್ಕೆ ತಲುಪಿದೆ.

ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕವು 394ಕ್ಕೆ ತಲುಪಿದೆ. ಈ ಮೂಲಕ ಸೋಮವಾರಕ್ಕೆ ಹೋಲಿಸಿದಾಗ 'ತೀವ್ರ' ಮಟ್ಟದಿಂದ (421) ಸ್ವಲ್ಪ ಸುಧಾರಣೆ ಕಂಡುಬಂದಿದೆ.

ಗಾಳಿ ಗುಣಮಟ್ಟ ಕಳೆದ ಐದು ದಿನಗಳಲ್ಲಿ ಸತತವಾಗಿ ತೀವ್ರ ಮಟ್ಟದಲ್ಲಿತ್ತು.

ನೆರೆಯ ಹರಿಯಾಣ, ರಾಜಸ್ಥಾನ, ಮತ್ತು ಉತ್ತರ ಪ್ರದೇಶದ ಹಲವು ಪ್ರದೇಶಗಲ್ಲಿ ವಾಯು ಗುಣಮಟ್ಟ ಹದಗೆಟ್ಟಿದೆ ಎಂದು ವರದಿಯಾಗಿದೆ. ವಾಯು ಗುಣಮಟ್ಟ ಸೂಚ್ಯಂಕವು ಗಾಜಿಯಾಬಾದ್ನಲ್ಲಿ 338, ಗುರುಗ್ರಾಮದಲ್ಲಿ 364, ನೋಯ್ಡಾದಲ್ಲಿ 348, ಗ್ರೇಟರ್ ನೋಯ್ಡಾ 439 ಮತ್ತು ಫರಿದಾಬಾದ್ನಲ್ಲಿ 382 ದಾಖಲಾಗಿದೆ.

ಏತನ್ಮಧ್ಯೆ ವಾಯುಮಾಲಿನ್ಯ ನಿಯಂತ್ರಣ ಕ್ರಮವಾಗಿ ದೆಹಲಿಯಲ್ಲಿ ನ. 13ರಿಂದ 20ರವರೆಗೆ ಸಮ ಹಾಗೂ ಬೆಸ ನೋಂದಣಿ ಸಂಖ್ಯೆ ಆಧಾರದಲ್ಲಿ ಕಾರುಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲು ದೆಹಲಿ ಸರ್ಕಾರ ನಿರ್ಧರಿಸಿದೆ. ಸರ್ಕಾರಿ ಹಾಗೂ ಖಾಸಗಿ ವಲಯದ ಶೇಕಡಾ 50ರಷ್ಟು ನೌಕರರಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಕಲ್ಪಿಸಲಾಗಿದೆ. ನವೆಂಬರ್ 10ರವೆರೆಗ 10 ಮತ್ತು 12ನೇ ತರಗತಿಗಳನ್ನು ಹೊರತುಪಡಿಸಿ, ಎಲ್ಲ ಶಾಲೆಗಳ ಭೌತಿಕ ತರಗತಿಗಳನ್ನು ಸ್ಥಗಿತಗೊಳಿಸಬೇಕೆಂದು ನಿರ್ದೇಶಿಸಲಾಗಿದೆ.

ವಾಯು ಗುಣಮಟ್ಟ ಮಾಪನ ಸೂಚ್ಯಂಕದ ಅನುಸಾರ, 0 ಮತ್ತು 50 ರ ನಡುವಿನ ಎಕ್ಯೂಐ ಅನ್ನು ‘ಉತ್ತಮ’, 51 ಮತ್ತು 100 ‘ತೃಪ್ತಿದಾಯಕ’, 101 ಮತ್ತು 200 ‘ಮಧ್ಯಮ’, 201 ಮತ್ತು 300 ‘ಕಳಪೆ’, 301 ಮತ್ತು 400 ‘ಅತಿ ಕಳಪೆ’, ಮತ್ತು 401 ಮತ್ತು 500 ‘ತೀವ್ರ’ ಎಂದು ಪರಿಗಣಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.