ನಾಗ್ಪುರ: ಕ್ರಿಪ್ಟೊ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂದು ನಂಬಿಸಿ ಮಹಾರಾಷ್ಟ್ರದ ನಾಗ್ಪುರದ ಕಾಲೇಜ್ವೊಂದರ ಎಂಬಿಎ ವಿದ್ಯಾರ್ಥಿಗೆ ₹23 ಲಕ್ಷ ವಂಚನೆ ಮಾಡಿರುವ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದ ಹೂಗ್ಲಿ ಮೂಲದ 28 ವರ್ಷದ ವಿದ್ಯಾರ್ಥಿ ಮೋಸಕ್ಕೆ ಒಳಗಾಗಿದ್ದಾನೆ.

2023ರ ನವೆಂಬರ್ 17ರಂದು ಟೆಲಿಗ್ರಾಮ್ ಮೆಸೇಜಿಂಗ್ ಆ್ಯಪ್ನಲ್ಲಿ ಹೂಡಿಕೆ ಸಲಹೆಗಾರನಂತೆ ವಂಚಕ ವಿದ್ಯಾರ್ಥಿಯನ್ನು ಸಂಪರ್ಕಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ವಿದ್ಯಾರ್ಥಿ ಆರಂಭದಲ್ಲಿ ₹1,000 ಹೂಡಿಕೆ ಮಾಡಿ ₹1,400 ಗಳಿಸಿದ್ದನು. ಆ ಮೂಲಕ ವಿದ್ಯಾರ್ಥಿಯ ನಂಬಿಕೆ ಗಿಟ್ಟಿಸಿಕೊಳ್ಳುವಲ್ಲಿ ವಂಚಕ ಯಸಸ್ವಿಯಾಗಿದ್ದ. ಬಳಿಕ ಹೆಚ್ಚಿನ ಲಾಭ ಗಳಿಸುವ ಇರಾದೆಯಲ್ಲಿ ಒಟ್ಟು 23 ಲಕ್ಷ ಹೂಡಿಕೆ ಮಾಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಹಣ ಸಿಗದಿದ್ದಾಗ ಕೊನೆಗೂ ವಂಚನೆ ಮನಗಂಡ ವಿದ್ಯಾರ್ಥಿ, ವಾಥೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಇದರ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಪ್ರಾರಂಭಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.