ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕಳೆದ ಏಳು ವರ್ಷಗಳಲ್ಲಿ ಕೈಗೊಂಡ ಉತ್ತಮ ನಿರ್ಧಾರ ಮತ್ತು ಸುಧಾರಣೆಗಳೊಂದಿಗೆ ಲಕ್ಷಾಂತರ ರೈತರ ಜೀವನವನ್ನು ಬದಲಾಯಿಸಿದೆ ಹಾಗೂ ಕೈಗೆಟುಕುವ ಮತ್ತು ಗುಣಮಟ್ಟದ ಆರೋಗ್ಯ ಸೇವೆಯನ್ನು ಖಾತರಿಪಡಿಸಿದೆ ಎಂದು ಮಾಹಿತಿ ಮತ್ತು ಪ್ರಸಾರ (ಐ ಮತ್ತು ಬಿ) ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.

ಮೋದಿ ಸರ್ಕಾರದ ಏಳನೇ ವಾರ್ಷಿಕೋತ್ಸವದಂದು ಅವರು, ಕಳೆದ ಏಳು ವರ್ಷಗಳಿಂದ ದೇಶದ ಸೇವೆ ಮತ್ತು ಜನರ ಕಲ್ಯಾಣಕ್ಕಾಗಿ ಮಾಡಿದ ಕಾರ್ಯಗಳಿಗಾಗಿ ಪ್ರಧಾನಿಗೆ ಅಭಿನಂದನೆಗಳು. ಇಂದು, ಈ ದಿನವನ್ನು 'ಸೇವಾ ದಿವಸ್' ಎಂದು ಆಚರಿಸಲಾಗುತ್ತಿದೆ. ನಿಮ್ಮ ನೆರೆಹೊರೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನೀವು ಸಹ ಭಾಗವಹಿಸಬೇಕು' ಎಂದು ಕೇಂದ್ರ ಸಚಿವರು ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸರಣಿ ಟ್ವೀಟ್ಗಳಲ್ಲಿ ಹೇಳಿದ್ದಾರೆ.

ಮೋದಿ ಸರ್ಕಾರ 'ಕಳೆದ ಏಳು ವರ್ಷಗಳಲ್ಲಿ ರೈತರ ಕಲ್ಯಾಣಕ್ಕಾಗಿ ಸಮರ್ಪಕವಾಗಿ ಕೆಲಸ ಮಾಡಿದೆ ಮತ್ತು ಕೃಷಿ ಕ್ಷೇತ್ರದಲ್ಲಿ ಮಹತ್ವದ ನಿರ್ಧಾರಗಳು ಮತ್ತು ಸುಧಾರಣೆಗಳೊಂದಿಗೆ ಲಕ್ಷಾಂತರ ರೈತರ ಜೀವನವನ್ನು ಬದಲಿಸಿದೆ' ಎಂದು ಜಾವಡೇಕರ್ ಹೇಳಿದರು.

' ಶ್ರೀ ನರೇಂದ್ರ ಮೋದಿ ಅವರ ಸರ್ಕಾರವು ಈ 7 ವರ್ಷಗಳಲ್ಲಿ ಎಲ್ಲಾ ನಾಗರಿಕರಿಗೆ ಕೈಗೆಟುಕುವ ಮತ್ತು ಗುಣಮಟ್ಟದ ಆರೋಗ್ಯ ಸೇವೆಗಳನ್ನು ಖಾತರಿಪಡಿಸಿದೆ ಮತ್ತು ಅಭೂತಪೂರ್ವ ಪ್ರಮಾಣದಲ್ಲಿ ದೇಶದ ಆರೋಗ್ಯ ಕ್ಷೇತ್ರವನ್ನು ಪರಿಣಾಮಕಾರಿಯಾಗಿ ಸುಧಾರಿಸಲು ಮತ್ತು ಬಲಪಡಿಸಲು ಮುಂದುವರೆದಿದೆ' ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.