ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗುಜರಾತ್‌ನಲ್ಲಿ ಭಾರಿ ಮಳೆ: ಅಪಾಯದ ಮಟ್ಟ ಮೀರಿದ ಪೂರ್ಣಾ ನದಿ, 2500 ಜನರ ಸ್ಥಳಾಂತರ

Published 26 ಜುಲೈ 2024, 10:04 IST
Last Updated 26 ಜುಲೈ 2024, 10:04 IST
ಅಕ್ಷರ ಗಾತ್ರ

ನವ್ಸಾರಿ: ಗುಜರಾತ್‌ನ ದಕ್ಷಿಣ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಹಲವು ಗ್ರಾಮಗಳ ಸುಮಾರು 2,500 ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

'ಜಿಲ್ಲೆಯಲ್ಲಿ ಹರಿಯುವ ಪೂರ್ಣಾ ನದಿಯು, ಭಾರಿ ಮಳೆಯಿಂದಾಗಿ ಅಪಾಯದ ಮಟ್ಟ ಮೀರಿದೆ. ನವ್ಸಾರಿ ನಗರ ಮತ್ತು ಸುತ್ತಲಿನ ಪ್ರದೇಶಗಳಿಂದ ಕನಿಷ್ಠ 2,200 ಜನರನ್ನು ಸ್ಥಳಾಂತರಿಸಲಾಗಿದೆ. ಆಶ್ರಯ ಶಿಬಿರಗಳು ಇರುವಲ್ಲಿಗೆ 15 ವ್ಯದ್ಯಕೀಯ ತಂಡಗಳನ್ನು ನಿಯೋಜಿಸಲಾಗಿದೆ' ಎಂದು ನವ್ಸಾರಿ ಜಿಲ್ಲಾಧಿಕಾರಿ ಕ್ಷಿಪ್ರಾ ಆಗ್ರೆ ಮಾಹಿತಿ ನೀಡಿದ್ದಾರೆ.

ಜಲಾವೃತವಾಗಿರುವ ಕಾರಣ ಜಿಲ್ಲೆಯ 4 ಮುಖ್ಯ ರಸ್ತೆಗಳು, 70 ಆಂತರಿಕ ಸಂಪರ್ಕ ರಸ್ತೆಗಳಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದೂ ಹೇಳಿದ್ದಾರೆ.

ತಾಪಿ ಜಿಲ್ಲೆಯ ವಲೊದ ತಾಲ್ಲೂಕಿನ ಗ್ರಾಮಗಳಿಂದ 500 ಜನರನ್ನು ಸ್ಥಳಾಂತರಿಸಲಾಗಿದೆ. ಜಿಲ್ಲೆಯ 113 ಆಂತರಿಕ ಸಂಪರ್ಕ ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ದಳ ತಿಳಿಸಿದೆ.

ಗುಜರಾತ್‌ನ ದಕ್ಷಿಣ ಜಿಲ್ಲೆಗಳಲ್ಲಿ ಶುಕ್ರವಾರ ಮತ್ತು ಶನಿವಾರವೂ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT