ಕೊಚ್ಚಿ: ಪ್ರಧಾನಿ ನರೇಂದ್ರ ಮೋದಿಯವರ ಭೇಟಿ ಹಿನ್ನೆಲೆ ಭದ್ರತೆಗಾಗಿ ಇಲ್ಲಿನ ರಸ್ತೆಯೊಂದರಲ್ಲಿ ಅಳವಡಿಸಿದ್ದ ಹಗ್ಗಕ್ಕೆ ಸಿಲುಕಿ ದ್ವಿಚಕ್ರ ವಾಹನ ಸವಾರನೊಬ್ಬ ದುರಂತ ಸಾವಿಗೀಡಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
.ಇರಾನ್ ವಶದಲ್ಲಿರುವ ಕೇರಳ ಕುಟುಂಬದವರು ಸುರಕ್ಷಿತ.
ವಡುತಳಾ ನಿವಾಸಿ ಮನೋಜ್ ಉಣ್ಣಿ ಮೃತರು. ಭಾನುವಾರ ರಾತ್ರಿ 10.30ಕ್ಕೆ ಘಟನೆ ನಡೆದಿದೆ. ಅಪಘಾತ ನಡೆದ ಕೂಡಲೇ ಸಮೀಪದ ಆಸ್ಪತ್ರೆಗೆ ಉಣ್ಣಿ ಅವರನ್ನು ಕರೆದುಕೊಂಡು ಹೋದರೂ ಅವರು ಬದುಕುಳಿಯಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಯಾವುದೇ ಎಚ್ಚರಿಕೆ ಫಲಕಗಳು ಇಲ್ಲದೆ ರಸ್ತೆಗಳಲ್ಲಿ ಹಗ್ಗಗಳನ್ನು ಕಟ್ಟಲಾಗಿದ್ದು, ರಾತ್ರಿ ವೇಳೆ ಪತ್ತೆ ಹಚ್ಚುವುದು ಕಷ್ಟ ಎಂದು ಉಣ್ಣಿ ಅವರ ಕುಟುಂಬಸ್ಥರು ಹೇಳಿದ್ದಾರೆ.
.ಕೇರಳ: ಈದ್ ಪ್ರಾರ್ಥನೆಗೆ ಬಾಗಿಲು ತೆರೆದು ಸೌಹಾರ್ದ ಸಾರಿದ ಚರ್ಚ್.
‘ಪ್ರಧಾನಿ ನರೇಂದ್ರ ಮೋದಿಯವರ ಭೇಟಿಯ ಹಿನ್ನೆಲೆ ಭದ್ರತೆಗಾಗಿ ಹಗ್ಗಗಳನ್ನು ಕಟ್ಟಲಾಗಿದೆ. ರಾತ್ರಿಯಲ್ಲಿ ಅದು ಗೋಚರಿಸುವಂತೆ ಅಲ್ಲಿ ರಿಬ್ಬನ್ ಅಥವಾ ಯಾವುದೇ ಪ್ರತಿಫಲಿಸುವ ವಸ್ತುಗಳು ಇರಲಿಲ್ಲ’ ಎಂದು ಉಣ್ಣಿಯವರ ಸಂಬಂಧಿಯೊಬ್ಬರು ಮಾಧ್ಯಮದವರೊಂದಿಗೆ ಹೇಳಿದ್ದಾರೆ.
.ಮದರಸಾ ಶಿಕ್ಷಕನ ಹತ್ಯೆ | ಮೂವರು RSS ಕಾರ್ಯಕರ್ತರು ಖುಲಾಸೆ: ಕೇರಳ ಕೋರ್ಟ್ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.