ಮುಜಾಫರ್‌ನಗರ: ಮಹಿಳೆಯೊಬ್ಬರ ಕೂದಲನ್ನು ವಿನ್ಯಾಸಗೊಳಿಸುವಾಗ ಉಗುಳಿದ ಆರೋಪದಡಿ ಪೊಲೀಸರು, ಉತ್ತರ ಪ್ರದೇಶದ ಮುಜಾಫರ್‌ನಗರದ ಖ್ಯಾತ ಕೇಶ ವಿನ್ಯಾಸಕ ಜಾವೇದ್ ಹಬೀಬ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಜನವರಿ 3 ರಂದು ಇಲ್ಲಿ ನಡೆದ ಕೇಶ ವಿನ್ಯಾಶ ಕಾರ್ಯಾಗಾರದಲ್ಲಿ ನಡೆದ ಘಟನೆಯ ವಿಡಿಯೊ ಗುರುವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ವಿಡಿಯೊದಲ್ಲಿ, ಹಬೀಬ್ ಅವರು ಪ್ರೇಕ್ಷಕರಿಗೆ ‘ನೀರಿನ ಕೊರತೆಯಿದ್ದರೆ, ಲಾಲಾರಸವನ್ನು ಬಳಸಿ’ಎಂದು ಹೇಳುವುದನ್ನು ಕಾಣಬಹುದಾಗಿದೆ.

ಕಾರ್ಯಾಗಾರದ ವೇಳೆ ತಮ್ಮ ಕೂದಲಿನ ಮೇಲೆ ಉಗುಳಿದ ಆರೋಪದಡಿ ಬರೌತ್ ಪಟ್ಟಣದ ನಿವಾಸಿ ಪೂಜಾ ಗುಪ್ತಾ ನೀಡಿದ ದೂರಿನ ಮೇರೆಗೆ ಇಲ್ಲಿನ ಮನ್ಸೂರ್‌ಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಬೀಬ್ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಸಾಂಕ್ರಾಮಿಕ ರೋಗಗಳ ಕಾಯ್ದೆ, 1897ರ ಸೆಕ್ಷನ್ 355ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಇದೇ ವೇಳೆ, ಹಬೀಬ್ ವಿರುದ್ಧ ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಕೇಶ ವಿನ್ಯಾಸಕರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.