ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರ ಹಾಗೂ ಡ್ರಗ್ ಪೆಡ್ಲರ್ ಪರ್ವೇಜ್ ಖಾನ್ ಅಲಿಯಾಸ್ ಚಿಂಕು ಪಠಾಣ್ನೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಮೇರೆಗೆ ಡ್ರಗ್ ಪೆಡ್ಲರ್ ಹ್ಯಾರಿಸ್ ಖಾನ್ನನ್ನು ಮುಂಬೈನ ಮಾದಕವಸ್ತು ನಿಯಂತ್ರಣ ಬ್ಯೂರೊದ (ಎನ್ಸಿಬಿ) ಅಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ.

ಬಾಲಿವುಡ್ನ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದಲ್ಲಿ ಖಾನ್ ಪಾತ್ರವಿರುವ ಕುರಿತು ಎನ್ಸಿಬಿ ತನಿಖೆ ನಡೆಸಲಿದೆ ಎಂದು ಎನ್ಸಿಬಿ ಅಧಿಕಾರಿ ತಿಳಿಸಿದರು.

ಎನ್ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ನೇತೃತ್ವದ ತಂಡ, ಮುಂಬೈನ ಅಂಧೇರಿ ಉಪನಗರ, ಲೋಖಂಡ್ವಾಲಾ ಮತ್ತು ಬಾಂದ್ರಾ ಸೇರಿದಂತೆ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿ, ಖಾನ್ನನ್ನು ಮಂಗಳವಾರ ಬಂಧಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಉತ್ತರ ಪ್ರದೇಶ: ₹15 ಕೋಟಿ ಮೌಲ್ಯದ ಮಾರ್ಫಿನ್ ವಶ, ಮೂವರ ಬಂಧನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.