ನವದೆಹಲಿ: ವರ್ಷದ ಪ್ರಾರಂಭದಿಂದ ಇಲ್ಲಿಯವರೆಗೆ ರಾಷ್ಟ್ರೀಯ ಮಹಿಳಾ ಆಯೋಗ (ಎನ್ಸಿಡಬ್ಲ್ಯೂ) 12,600 ದೂರುಗಳನ್ನು ಸ್ವೀಕರಿಸಿದ್ದು, ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ದೂರಗಳು ದಾಖಲಾಗಿವೆ ಎಂದು ಆಯೋಗದ ಅಧಿಕೃತ ದತ್ತಾಂಶ ತಿಳಿಸಿದೆ.

‘3,544 ಕೌಟುಂಬಿಕ ಹಿಂಸಾಚಾರ, 1,957 ವರದಕ್ಷಿಣೆ ಕಿರುಕುಳ, 817 ಕಿರುಕುಳ, 518 ಮಹಿಳಾ ದೂರುಗಳ ವಿರುದ್ಧ ಪೊಲೀಸರ ನಿರಾಸಕ್ತಿ , 657 ಅತ್ಯಾಚಾರ ಮತ್ತು ಅತ್ಯಾಚಾರಕ್ಕೆ ಯತ್ನ, 493 ಲೈಂಗಿಕ ಕಿರುಕುಳ, 339 ಸೈಬರ್ ಅಪರಾಧ , 345 ಹಿಂಬಾಲಿಸುವಿಕೆ ಮತ್ತು 206 ಇತರ ಅಪರಾಧಗಳಿಗೆ ಸಂಬಂಧಿಸಿದಂತೆ ದೂರುಗಳು ಬಂದಿವೆ’ ಎಂದು ಹೇಳಿದೆ.

‘ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ದೂರುಗಳು ಅಂದರೆ 6,470, ದೆಹಲಿಯಲ್ಲಿ 1,113, ಮಹಾರಾಷ್ಟ್ರದಲ್ಲಿ 762 ದೂರುಗಳು ದಾಖಲಾಗಿವೆ. ಬಿಹಾರದಲ್ಲಿ 584, ಮಧ್ಯಪ್ರದೇಶದಲ್ಲಿ 514, ಹರಿಯಾಣದಲ್ಲಿ 506, ರಾಜಸ್ಥಾನದಲ್ಲಿ 408, ತಮಿಳುನಾಡಿನಲ್ಲಿ 301, ಪಶ್ಚಿಮ ಬಂಗಾಳದಲ್ಲಿ 306 ಮತ್ತು ಕರ್ನಾಟಕದಲ್ಲಿ 305 ದೂರುಗಳು ದಾಖಲಾಗಿವೆ’ ಎಂದು ಅಂಕಿ ಅಂಶಗಳು ತಿಳಿಸಿವೆ.

2023ರಲ್ಲಿ ಮಹಿಳೆಯರಿಗೆ ಸಂಬಂಧಿಸಿದಂತೆ ಒಟ್ಟು 28,811 ದೂರುಗಳನ್ನು ದಾಖಲಾಗಿದ್ದವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.