ನವದೆಹಲಿ: ರಾಜಪಥಕ್ಕೆ ‘ಕರ್ತವ್ಯ ಪಥ’ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಯನ್ನು ನವದೆಹಲಿ ಮುನ್ಸಿಪಲ್ ಕೌನ್ಸಿಲ್(ಎನ್ಡಿಎಂಸಿ) ಅನುಮೋದಿಸಿದೆ.

ಕೇಂದ್ರ ವಿದೇಶಾಂಗ ವ್ಯವಹಾರ ಮತ್ತು ಸಂಸ್ಕೃತಿ ಖಾತೆ ರಾಜ್ಯ ಸಚಿವೆ ಹಾಗೂ ಎನ್ಡಿಎಂಸಿ ಸದಸ್ಯರೂ ಆಗಿರುವ ಮೀನಾಕ್ಷಿ ಲೇಖಿ ಅವರ ನೇತೃತ್ವದಲ್ಲಿ ನಡೆದ ವಿಶೇಷ ಎನ್ಡಿಎಂಸಿ ಸಭೆ ಬಳಿಕ ಪ್ರಸ್ತಾವನೆಯನ್ನು ಅಂಗೀಕರಿಸಿರುವುದಾಗಿ ಅವರು ತಿಳಿಸಿದ್ಧಾರೆ.

‘ವಿಶೇಷ ಕೌನ್ಸಿಲ್ ಸಭೆಯಲ್ಲಿ ರಾಜಪಥಕ್ಕೆ ಕರ್ತವ್ಯ ಪಥ ಎಂದು ಮರು ನಾಮಕರಣ ಮಾಡುವ ಪ್ರಸ್ತಾವವನ್ನು ಅಂಗೀಕರಿಸಲಾಗಿದೆ’ ಎಂದು ಲೇಖಿ ತಿಳಿಸಿದ್ದಾರೆ.

ಈ ಕುರಿತಂತೆ ಎನ್ಡಿಎಂಸಿಗೆ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದಿಂದ ಪ್ರಸ್ತಾವನೆ ಬಂದಿತ್ತು ಎಂದು ಎನ್ಡಿಎಂಸಿ ಉಪಾಧ್ಯಕ್ಷ ಸತೀಶ್ ಉಪಾಧ್ಯಾಯ ಹೇಳಿದ್ದಾರೆ.

ಇನ್ನುಮುಂದೆ ಇಂಡಿಯಾ ಗೇಟ್ನಲ್ಲಿರುವ ನೇತಾಜಿ ಪ್ರತಿಮೆಯಿಂದ ರಾಷ್ಟ್ರಪತಿ ಭವನದವರೆಗಿನ ಸಂಪೂರ್ಣ ಪ್ರದೇಶವನ್ನು 'ಕರ್ತವ್ಯ ಪಥ' ಎಂದು ಕರೆಯಲಾಗುವುದು ಎಂದು ಅವರು ಹೇಳಿದರು.

ಎನ್ಡಿಎಂಸಿ ಸದಸ್ಯರೂ ಆಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಭೆಯಲ್ಲಿ ಭಾಗವಹಿಸಿರಲಿಲ್ಲ.

‘ಎನ್ಡಿಎಂಸಿ ಕೌನ್ಸಿಲ್ ಇಂದು (ಬುಧವಾರ) ನವದೆಹಲಿಯ ಪಾಲಿಕಾ ಕೇಂದ್ರದ ಕೌನ್ಸಿಲ್ ಕೊಠಡಿಯಲ್ಲಿ ನಡೆದ ವಿಶೇಷ ಸಭೆಯಲ್ಲಿ ರಾಜಪಥ ಮತ್ತು ಸೆಂಟ್ರಲ್ ವಿಸ್ಟಾ ಲಾನ್ ಅನ್ನು ಕರ್ತವ್ಯ ಪಥ ಎಂದು ಮರುನಾಮಕರಣ ಮಾಡಲು ನಿರ್ಧರಿಸಿದೆ’ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ನಿರ್ಧಾರದ ಆಧಾರದ ಮೇಲೆ ಸಂಬಂಧಪಟ್ಟ ಇಲಾಖೆಯು ಬೋರ್ಡ್ಗಳು ಮತ್ತು ನಾಮಫಲಕಗಳಲ್ಲಿನ ಹೆಸರುಗಳನ್ನು ಬದಲಾಯಿಸುವಂತಹ ಮುಂದಿನ ಅಗತ್ಯ ಕ್ರಮಗಳನ್ನು ಪ್ರಾರಂಭಿಸಬಹುದು ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.

ಬ್ರಿಟಿಷರ ಆಳ್ವಿಕೆಯಲ್ಲಿ ರಾಜಪಥವನ್ನು ಕಿಂಗ್ಸ್ ವೇ ಎಂದು ಕರೆಯಲಾಗುತ್ತಿತ್ತು.

ಈ ವರ್ಷದ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಸಾಹತುಶಾಹಿ ಮನಸ್ಥಿತಿಗೆ ಸಂಬಂಧಿಸಿದ ಚಿಹ್ನೆಗಳ ನಿರ್ಮೂಲನೆ ಮಾಡುವುದಾಗಿ ಒತ್ತು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.