ಕೋಲ್ಕತ್ತ: ‘ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಚಿತಾಭಸ್ಮವನ್ನು ಜಪಾನ್‌ನ ಟೋಕಿಯೊದ ರೆಂಕೋಜಿ ದೇಗುಲದಿಂದ ಭಾರತಕ್ಕೆ ತಂದು ಡಿಎನ್ಎ ಪರೀಕ್ಷೆ ಮಾಡಬೇಕು’ ಎಂದು ನೇತಾಜಿ ಅವರ ಮೊಮ್ಮಗ ಸೂರ್ಯಕುಮಾರ್ ಬೋಸ್ ಅವರು ಬುಧವಾರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

‘1954ರ ಆಗಸ್ಟ್ 18ರಂದು ನೇತಾಜಿ ಅವರು ನಾಪತ್ತೆಯಾಗಿದ್ದರು. ಅವರು ವಿಮಾನ ದುರಂತದಲ್ಲಿ ಸಾವನ್ನಪ್ಪಿರಬಹುದು ಎಂದು ಇತಿಹಾಸಕಾರರು ಹೇಳುತ್ತಾರೆ. ಆದರೆ, ಅವರು ಅಪಘಾತದಲ್ಲಿ ಸಾಯಲಿಲ್ಲ, ಸಾಯುವವರೆಗೆ ಮಾರುವೇಷದಲ್ಲಿ ಜೀವಿಸಿದ್ದರು ಎಂದು ಅನೇಕರು ಹೇಳುತ್ತಾರೆ. ಈ ವಿವಾದಕ್ಕೆ ತೆರೆ ಎಳೆಯಲು ಜಪಾನ್‌ನಲ್ಲಿರುವ ನೇತಾಜಿ ಅವರ ಚಿತಾಭಸ್ಮವನ್ನು ಭಾರತಕ್ಕೆ ತಂದು ಡಿಎನ್ಎ ಪರೀಕ್ಷೆ ಮಾಡಬೇಕು’ ಎಂದು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಅವರು ಕೋರಿದ್ದಾರೆ.

‘ಎರಡು ದಶಕಗಳ ಹಿಂದೆ ನ್ಯಾಯಮೂರ್ತಿ ಮುಖರ್ಜಿ ಆಯೋಗವು (ಜೆಎಂಸಿಐ) ರೆಂಕೋಜಿ ದೇಗುಲದ ಅಧಿಕಾರಿಗಳು ನೀಡಿದ್ದ ಚಿತಾಭಸ್ಮದ ಡಿಎನ್‌ಎ ಪರೀಕ್ಷೆ ಮಾಡದೇ ಅಮೂಲ್ಯವಾದ ಅವಕಾಶವೊಂದನ್ನು ಕಳೆದುಕೊಂಡಿತು. ನೇತಾಜಿ ಅವರ ಕಣ್ಮರೆ ಕುರಿತ ಊಹಾಪೋಹಗಳಿಗೆ ತೆರೆ ಎಳೆಯಲು ಅವರ ಚಿತಾಭಸ್ಮವನ್ನು ಮರಳಿ ತಂದರೆ ಡಿಎನ್ಎ ಪರೀಕ್ಷೆ ಮಾಡಬಹುದು’ ಎಂದು ಜರ್ಮನಿಯಲ್ಲಿರುವ ಸೂರ್ಯಕುಮಾರ್ ಬೋಸ್ ಒತ್ತಾಯಿಸಿದ್ದಾರೆ.

ಈ ಹಿಂದೆ, ನೇತಾಜಿಯವರ ಮಗಳು ಅನಿತಾ ಬೋಸ್ ಅವರು ಕೂಡಾ ತಮ್ಮ ತಂದೆಯ ಅವಶೇಷಗಳನ್ನು ಮರಳಿ ತರುವ ಕುರಿತು ಭಾರತ ಮತ್ತು ಜಪಾನ್ ಸರ್ಕಾರಗಳಿಗೆ ಕೋರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.