ಠಾಣೆ (ಪಿಟಿಐ): ‘ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ನಂತರ ನನಗೂ ಜೀವ ಬೆದರಿಕೆ ಇದೆ’ ಎಂದು ಹೇಳಿರುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ದಾಮೋದರ್ ಮೌಜೊ, ‘ನನ್ನ ಆಲೋಚನೆಗಳನ್ನು ಯಾವುದೇ ಬಂದೂಕಿನಿಂದ ಅಂತ್ಯಗೊಳಿಸಲು ಆಗದು’ ಎಂದು ಹೇಳಿದರು.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಗೌರಿ ಲಂಕೇಶ್ ನಿಧನದ ನಂತರ ನಾನೂ ಸಹ ಕೆಲವರ ಹಿಟ್ಲಿಸ್ಟ್ನಲ್ಲಿದ್ದೇನೆ ಎಂಬುದು ಗೊತ್ತಾಯಿತು. ಆದರೆ, ಲೇಖಕನಾಗಿ ನನ್ನ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವುದರಿಂದ ರಕ್ಷಣೆಯ ಅಗತ್ಯವಿಲ್ಲ. ನಾಲ್ಕು ವರ್ಷಗಳಿಂದ ನನಗೆ ಇನ್ನೂ ಗುಂಡು ಹಾರಿಸಲಾಗಿಲ್ಲ. ನನ್ನ ಆಲೋಚನೆಗಳನ್ನುಗುಂಡಿನಿಂದ ಕೊನೆಗಾಣಿಸಲು ಸಾಧ್ಯವಿಲ್ಲ. ನಾನು ನಿರ್ಭೀತಿಯಿಂದ ಮಾತನಾಡುತ್ತೇನೆ’ ಎಂದು ತಿಳಿಸಿದರು.

ಸಾಹಿತ್ಯಾಸಕ್ತರು ರಾಜಕೀಯದಲ್ಲಿ ಭಾಗಿಯಾಗಬಾರದು ಎಂದು ಹೇಳುವುದು ತಪ್ಪು. ಆದರೆ, ಪಕ್ಷ ರಾಜಕಾರಣದಲ್ಲಿ ತೊಡಗಬಾರದು ಎಂದು ಹೇಳಿದರು.

ಕೊಂಕಣಿಯಲ್ಲಿ ಪ್ರಗತಿಪರ ಬರವಣಿಗೆ ಮತ್ತು ವಿಶೇಷವಾಗಿ ಅವರ ಕಾದಂಬರಿ ‘ಕಾರ್ಮೆಲಿನ್’ ನಿಂದ ಹೆಸರುವಾಸಿಯಾದ ಮೌಜೊ ಅವರಿಗೆ ಕೇಂದ್ರ ಗೃಹ ಸಚಿವಾಲಯ ಮತ್ತು ಲಂಕೇಶ್ ಸಾವಿನ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಗುಪ್ತಚರ ಮಾಹಿತಿ ಮೇರೆಗೆ 2018ರ ಜುಲೈನಲ್ಲಿ ಗೋವಾ ಪೊಲೀಸರು ಭದ್ರತೆ ಒದಗಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.