ಗೋವಾ: ಭಾರತ ಆಯೋಜಿಸಿರುವ ಶಾಂಘೈ ಸಹಕಾರ ಸಂಘಟನೆ(ಎಸ್‌ಸಿಒ) ಸಭೆಗೆ ಆಗಮಿಸಿದ ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ, ಚೀನಾದ ವಿದೇಶಾಂಗ ಮಂತ್ರಿ ಕ್ವಿನ್ ಗ್ಯಾಂಗ್ ಮತ್ತು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಸೇರಿದಂತೆ ವಿವಿಧ ದೇಶಗಳ ಸಚಿವರನ್ನು ನಮಸ್ಕಾರ ಮಾಡುವ ಮೂಲಕ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈ ಶಂಕರ್ ಶುಕ್ರವಾರ ಬರಮಾಡಿಕೊಂಡಿದ್ದಾರೆ.

ಜೈಶಂಕರ್ ಆಯೋಜಿಸಿದ್ದ ಸ್ವಾಗತ ಕೂಟದ ಮೂಲಕ ಎರಡು ದಿನಗಳ ಎಸ್‌ಸಿಒ ವಿದೇಶಾಂಗ ಮಂತ್ರಿಗಳ ಕೌನ್ಸಿಲ್ ಸಭೆಯೂ ಗುರುವಾರ ಸಂಜೆ ಇಲ್ಲಿನ ತಾಜ್ ಎಕ್ಸೋಟಿಕಾ ರೆಸಾರ್ಟ್‌ನಲ್ಲಿ ಪ್ರಾರಂಭವಾಯಿತು. ಮುಖ್ಯ ಚರ್ಚೆಗಳು ಇಂದು ನಡೆಯಲಿವೆ.

ಸಭೆಗೆ ಆಗಮಿಸಿದ ಎಲ್ಲಾ ವಿದೇಶಿ ಸಚಿವರನ್ನು ಹಸ್ತಲಾಘವ ಮಾಡುವ ಬದಲು ನಮಸ್ಕಾರ ಮಾಡುವ ಮೂಲಕ ಜೈ ಶಂಕರ್ ಬರಮಾಡಿಕೊಂಡರು.

ಬಿಲಾವಲ್ ಗುರುವಾರ ಗೋವಾಗೆ ಬಂದಿಳಿದಿದ್ದು, ಕಳೆದ 12 ವರ್ಷಗಳ ನಂತರ ಭಾರತಕ್ಕೆ ಭೇಟಿ ನೀಡಿರುವ ಮೊದಲ ಪಾಕಿಸ್ತಾನಿ ವಿದೇಶಾಂಗ ಸಚಿವರಾಗಿದ್ದಾರೆ.

2011ರಲ್ಲಿ ಪಾಕಿಸ್ತಾನದ ಆಗಿನ ವಿದೇಶಾಂಗ ಸಚಿವೆ ಹಿನಾ ರಬ್ಬಾನಿ ಖಾರ್ ಭಾರತಕ್ಕೆ ಭೇಟಿ ನೀಡಿ ಅಂದಿನ ವಿದೇಶಾಂಗ ಸಚಿವ ಎಸ್. ಎಂ ಕೃಷ್ಣ ಅವರೊಂದಿಗೆ ಮಾತುಕತೆ ನಡೆಸಿದ್ದರು.

ಎಸ್‌ಸಿಒ ಸಂಘಟನೆಯು ಪ್ರಭಾವಿ ದೇಶಗಳ ಆರ್ಥಿಕ ಮತ್ತು ಭದ್ರತಾ ಒಕ್ಕೂಟವಾಗಿದೆ.

ಎಸ್‌ಸಿಒ ಅನ್ನು 2001 ರಲ್ಲಿ ಶಾಂಘೈನಲ್ಲಿ ನಡೆದ ಶೃಂಗಸಭೆಯಲ್ಲಿ ರಷ್ಯಾ, ಚೀನಾ, ಕಿರ್ಗಿಜ್ ರಿಪಬ್ಲಿಕ್, ಕಜಕಿಸ್ತಾನ, ತಜಕಿಸ್ತಾನ ಮತ್ತು ಉಜ್ಬೇಕಿಸ್ತಾನ ಅಧ್ಯಕ್ಷರು ಸ್ಥಾಪಿಸಿದರು. ಭಾರತ ಮತ್ತು ಪಾಕಿಸ್ತಾನವು 2017 ರಲ್ಲಿ ಅದರ ಖಾಯಂ ಸದಸ್ಯ ರಾಷ್ಟ್ರಗಳಾದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.