ಚೆನ್ನೈ: ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಅವರು ತಮ್ಮನ್ನು 'ಉಲಗನಾಯಗನ್' ಎಂದು ಕರೆಯದಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ಈ ಸಂಬಂಧ ಇಂದು (ಸೋಮವಾರ) ಮಾಧ್ಯಮ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಅವರು, ಅದನ್ನು ತಮ್ಮ ಎಕ್ಸ್/ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಮಕ್ಕಳ್ ನೀಧಿ ಮೈಯಂ (ಎಂಎನ್ಎಂ) ಪಕ್ಷ ಸ್ಥಾಪಕರೂ ಆಗಿರುವ ಕಮಲ್, 'ಅಗಾಧವಾದ ಪ್ರೀತಿಯಿಂದ ನನ್ನನ್ನು 'ಉಲಗನಾಯಗನ್' ಎಂದು ಹಾಗೂ ಇತರ ಅಡ್ಡ ಹೆಸರುಗಳಿಂದ ಕರೆಯಲಾಗುತ್ತದೆ. ಯಾರಿಗೂ ಅಗೌರವ ತೋರದೆ, ಮೇಲಿನ ಎಲ್ಲ ಹೆಸರುಗಳನ್ನು ನಿರಾಕರಿಸುತ್ತಿದ್ದೇನೆ' ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಟರಾದ ಸೂರ್ಯ, ಅಜಿತ್ ಅವರೂ ಈ ಹಿಂದೆ ಇಂತಹದೇ ಮನವಿಯನ್ನು ಮಾಡಿದ್ದರು. ಸೂರಿಯ ಅವರನ್ನು 'ನಡಿಪ್ಪಿನ್ ನಾಯಗನ್' ಎಂತಲೂ, ಅಜಿತ್ ಅವರನ್ನು 'ತಲಾ' ಎಂತಲೂ ಕರೆಯಲಾಗುತ್ತದೆ.
.ವೃತ್ತಿ ಜೀವನದ ಔನ್ನತ್ಯವನ್ನು ಎಸೆದು ಬಂದಿದ್ದೇನೆ.. ನಿಮಗಾಗಿ ನಾನು! ನಟ ವಿಜಯ್.ದಳಪತಿ ವಿಜಯ್ ನೇತೃತ್ವದ TVK ಪಕ್ಷದ ಸಿದ್ಧಾಂತದ ಬಗ್ಗೆ DMK, AIADMK ಹೇಳಿದ್ದೇನು?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.