ನವದೆಹಲಿ: ನೊಬೆಲ್ ಪುರಸ್ಕೃತ ಮತ್ತು ಮಕ್ಕಳ ಹಕ್ಕು ಕಾರ್ಯಕರ್ತ ಕೈಲಾಶ್ ಸತ್ಯಾರ್ಥಿ ಸೋಮವಾರ ‘ಜಾಗತಿಕ ಸಹಾನುಭೂತಿಗಾಗಿ ಸತ್ಯಾರ್ಥಿ ಚಳವಳಿ’ (ಎಸ್ಎಮ್ಜಿಸಿ) ಎನ್ನುವ ಹೊಸ ಪ್ರಯತ್ನಕ್ಕೆ ನಾಂದಿ ಹಾಡಿದರು. ಸಹಾನುಭೂತಿಯ ಸಂವಾದ ಮತ್ತು ಕ್ರಿಯೆಯ ಮೂಲಕ ಜಾಗತಿಕ ಆಡಳಿತದಲ್ಲಿ ಸುಧಾರಣೆ ತರುವುದು ಈ ಚಳವಳಿಯ ಉದ್ದೇಶವಾಗಿದೆ.

ಇಲ್ಲಿ ನಡೆದ ‘ಮಕ್ಕಳಿಗಾಗಿ ಪ್ರಶಸ್ತಿ ಪ್ರಶಸ್ತಿ ಪುರಸ್ಕೃತರು ಮತ್ತು ನಾಯಕರ ಸಭೆ’ಯಲ್ಲಿ ಅವರು ಎಸ್ಎಮ್ಜಿಸಿಗೆ ಚಾಲನೆ ನೀಡಿದರು.

ನೊಬೆಲ್ ಪುರಸ್ಕೃತರು, ಜಾಗತಿಕ ನಾಯಕರು, ಉದ್ಯಮಿಗಳು, ಶಿಕ್ಷಣ ತಜ್ಞರು, ಯುವಜನತೆ ಮತ್ತು ನಾಗರಿಕವನ್ನು ಒಗ್ಗೂಡಿಸುವ ಮೂಲಕ ಪ್ರಪಂಚದ ಕಂದಕಗಳನ್ನು ಮುಚ್ಚಿ ಎಲ್ಲರನ್ನೂ ಒಳಗೊಳ್ಳುವಂಥ ನ್ಯಾಯಪರವಾದ ಸಮಾಜ ನಿರ್ಮಾಣದ ಬೃಹತ್ ಕಾರ್ಯಕ್ಕಾಗಿ ಈ ಚಳವಳಿಯನ್ನು ಆರಂಭಿಸಲಾಗಿದೆ ಎಂದು ಕೈಲಾಶ್ ಸತ್ಯಾರ್ಥಿ ಹೇಳಿದರು.

‘ನಾನು ದಶಕಗಳ ಕಾಲ ‘ಸಹಾನುಭೂತಿಯ ಜಾಗತೀಕರಣ’ ಪ್ರತಿಪಾದಿಸಿದೆ. ಇಂದು ನಾವು ಅದರ ಮುಂದಿನ ಹಂತಕ್ಕೆ ಹೋಗಲು ಅಣಿಯಾಗಿದ್ದೇವೆ’ ಎಂದು ಅವರು ಹೇಳಿದರು.

ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಜೋಡಿ ವಿಲಿಯಮ್ಸ್, ಮೊರಾಕ್ಕೊ ಮಾಜಿ ಪ್ರಧಾನಿ ಸೆರ್ಗೆ ಟೆಲ್ಲೆ, ಪದ್ಮವಿಭೂಷಣ ಡಾ.ಆರ್.ಎ.ಮಾಶೇಲ್ಕರ ಹಾಗೂ ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್ ಸೇರಿದಂತೆ ಹಲವು ಗಣ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.