ಸೂರತ್: ಪ್ರಧಾನಿ ಮೋದಿ–ಮುಖ್ಯಮಂತ್ರಿ ಯೋಗಿ ಜೋಡಿಯನ್ನು ಮುರಿಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಉತ್ತರ ಪ್ರದೇಶ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಅವರು ಅಭಿಪ್ರಾಯಪಟ್ಟಿದ್ದಾರೆ. ಗುಜರಾತಿನ ಸೂರತ್ನವರು ಸೇರಿದಂತೆ ದೊಡ್ಡ ಸಂಖ್ಯೆಯ ಉತ್ತರ ಭಾರತೀಯರ ಬೆಂಬಲದಿಂದ ಈ ಬಾರಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಅವರು ಹೇಳಿದ್ದಾರೆ.

‘ಉತ್ತರ ಪ್ರದೇಶದ ಗೆಲುವಿಗೆ ಸಾಕಷ್ಟು ಜನರ ಕೊಡುಗೆಯಿದೆ. ಸೂರತ್ನ ನೂರಾರು ಜನರು ಉತ್ತರ ಪ್ರದೇಶಕ್ಕೆ ತೆರಳಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ಸಾಕಷ್ಟು ಸಂಖ್ಯೆಯ ಉತ್ತರ ಭಾರತೀಯರು ಸೂರತ್ನಲ್ಲಿ ನೆಲೆಸಿದ್ದಾರೆ. ಅವರೆಲ್ಲರ ಬೆಂಬಲದಿಂದ ಗೆಲುವು ಸಾಧ್ಯವಾಯಿತು. ಈ ಕಾರಣಕ್ಕೆ ನಮ್ಮನ್ನು ಅಭಿನಂದಿಸಬೇಕು. 35 ವರ್ಷಗಳ ಬಳಿಕ ಪಕ್ಷವೊಂದು ಎರಡನೇ ಬಾರಿಗೆ ಅಧಿಕಾರಕ್ಕೆ ಬಂದು ಇತಿಹಾಸ ಸೃಷ್ಟಿಸಿದೆ’ ಎಂದರು.

ಆನಂದಿಬೆನ್ ಪಟೇಲ್ ಅವರು ಈ ಹಿಂದೆ, ಗುಜರಾತ್ನ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದರು.

ಸಮಸ್ತ ಪಾಟಿದಾರ್ ಆರೋಗ್ಯ ಟ್ರಸ್ಟ್ನ ಕಿರಣ್ ವೈದ್ಯಕೀಯ ಕಾಲೇಜಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ, ಗುಜರಾತ್ ಸಿ.ಎಂ ಭೂಪೇಂದ್ರ ಪಟೇಲ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.