ಚಂಡೀಗಢ: ಯಾವುದೇ ಕೆಲಸಗಳನ್ನು ಮಾಡದೆ ಇತರರ ಮೇಲೆ ಆರೋಪಗಳನ್ನು ಮಾಡುವುದು ಆಮ್ ಆದ್ಮಿ ಪಕ್ಷದವರ ಡಿಎನ್ಎಯಲ್ಲಿದೆ ಎಂದು ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ವಾಗ್ದಾಳಿ ನಡೆಸಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚುತ್ತಿರುವ ವಾಯು ಮತ್ತು ಜಲ ಮಾಲಿನ್ಯಕ್ಕೆ ಬಿಜೆಪಿಯ ‘ಕೊಳಕು ರಾಜಕೀಯ’ ಕಾರಣ ಎಂದು ದೆಹಲಿ ಮುಖ್ಯಮಂತ್ರಿ ಅತಿಶಿ ಅವರು ಹೇಳಿಕೆ ನೀಡಿದ ಬೆನ್ನಲ್ಲೇ ಎಎಪಿ ಸರ್ಕಾರವು ಸುಳ್ಳು ಹೇಳುವ ಪ್ರವೃತ್ತಿಯನ್ನು ಹೊಂದಿದೆ ಮತ್ತು ತನ್ನದೇ ನ್ಯೂನತೆಗಳಿಗೆ ಇತರರ ಮೇಲೆ ಆರೋಪ ಹೊರಿಸುತ್ತದೆ ಎಂದು ಸೈನಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎಎಪಿ ಯಾವುದೇ ಕೆಲಸ ಮಾಡುತ್ತಿಲ್ಲ. ಇತರರ ಮೇಲೆ ಆರೋಪಗಳನ್ನು ಹೊರಿಸುವುದು ಅವರ ಡಿಎನ್ಎಯಲ್ಲಿದೆ. ನೀವು ಎಎಪಿ ಆಡಳಿತಾವಧಿಯನ್ನು ನೋಡಿರಬೇಕು. ದೆಹಲಿಯ ಜನತೆ ಅವರಿಗೆ ಬಹಳ ಸಮಯ ನೀಡಿದ್ದರು. ಕೇಜ್ರಿವಾಲ್ ಅವರು ಅಧಿಕಾರಕ್ಕೆ ಬಂದ ಬಳಿಕ ಮೊದಲು ಯಮುನಾ ನದಿ ಸ್ವಚ್ಚಗೊಳಿಸುತ್ತೇನೆ ಎಂದು ಹೇಳುತ್ತಿದ್ದರು. ದುರದೃಷ್ಟವಶಾತ್, ಕಳೆದ 10 ವರ್ಷಗಳಿಂದ ಅವರು ಇತರರನ್ನು ದೂಷಿಸುತ್ತಿದ್ದಾರೆ’ ಎಂದು ಹೇಳಿದರು.

ಬಿಜೆಪಿ ಆಡಳಿತವಿರುವ ಹರಿಯಾಣದಲ್ಲಿ ಕೃಷಿ ತ್ಯಾಜ್ಯ ಸುಡುವಿಕೆ, ಡೀಸೆಲ್ ಬಸ್ಗಳು ಮತ್ತು ಇಟ್ಟಿಗೆ ಗೂಡುಗಳು ದೆಹಲಿಯ ಕಳಪೆ ವಾಯು ಗುಣಮಟ್ಟಕ್ಕೆ ಕಾರಣವಾಗಿವೆ. ಹರಿಯಾಣವು ಸಂಸ್ಕರಿಸದ ಕೈಗಾರಿಕಾ ತ್ಯಾಜ್ಯ ನೀರನ್ನು ಯಮುನಾ ನದಿಗೆ ಬಿಡುತ್ತಿರುವ ಕಾರಣದಿಂದ ನದಿಯಲ್ಲಿ ನೊರೆ ಕಾಣಿಸಿಕೊಂಡಿದೆ ಎಂದು ಅತಿಶಿ ದೂಷಿಸಿದ್ದರು.

‘ಕೇಂದ್ರ ಸರ್ಕಾರವು ಯಮುನಾ ನದಿಯನ್ನು ಸ್ವಚ್ಛಗೊಳಿಸಲು ಎಎಪಿ ಸರ್ಕಾರಕ್ಕೆ ₹6,000 ಕೋಟಿ ನೀಡಿದೆ. ಇಷ್ಟು ಹಣ ಕೊಟ್ಟರೂ ಮನೆಯಲ್ಲಿ ಕುಳಿತು ಆರೋಪ ಮಾಡುತ್ತಿದ್ದಾರೆ. ಕೆಲಸ ಮಾಡುವ ಕಡೆ ಗಮನ ಹರಿಸುತ್ತಿಲ್ಲ. ಮೋದಿ ಅವರು ಕೊಟ್ಟ ಹಣವನ್ನು ಏನು ಮಾಡಿದ್ದಾರೆ ಎಂಬುದರ ಬಗ್ಗೆ ದೆಹಲಿಯ ಜನರಿಗೆ ಹೇಳಬೇಕು. ಅಲ್ಲದೆ, ದೆಹಲಿಯಲ್ಲಿ 28 ಕೊಳಕು ಚರಂಡಿಗಳಿವೆ. ಇವುಗಳಿಂದ ಯಮುನಾಕ್ಕೆ ಹರಿಯುವ ಕೊಳಕು ನೀರನ್ನು ಅತಿಶಿ ನೋಡಬೇಕು’ ಎಂದು ಸೈನಿ ತಿಳಿಸಿದರು.
.ಕೃಷಿ ತ್ಯಾಜ್ಯ ಸುಟ್ಟ ಆರೋಪ; ಹರಿಯಾಣದಲ್ಲಿ 14 ರೈತರ ಬಂಧನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.