ನವದೆಹಲಿ: ನೀಟ್ ಪರೀಕ್ಷೆ ಬರೆಯುವ ಮುನ್ನ ವಿದ್ಯಾರ್ಥಿನಿಯೊಬ್ಬರ ಒಳ ಉಡುಪು ತೆಗೆಸಿದ ಪ್ರಕರಣ ಪರಿಶೀಲಿಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ರಚಿಸಿರುವ ಮೂವರು ಸದಸ್ಯರ ಸಮಿತಿ ನಾಲ್ಕು ವಾರಗಳಲ್ಲಿ ವರದಿ ಸಲ್ಲಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎನ್‌ಟಿಎ ನಿರ್ದೇಶಕರಾದ ಸಾಧನಾ ಪರಾಶರ,ಕೇರಳದ ಸರಸ್ವತಿ ವಿದ್ಯಾಲಯದ ಪ್ರಾಂಶುಪಾಲರಾದ ಅರಪ್ಪುರ ಶೈಲಜಾ ಮತ್ತು ಪ್ರಗತಿ ಅಕಾಡೆಮಿಯಸುಚಿತ್ರಾ ಶೈಜಿಂತ್ ಅವರು ಸಮಿತಿಯಲ್ಲಿದ್ದಾರೆ.ಸಮಿತಿ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಸಂಬಂಧಪಟ್ಟವರ ಜತೆ ಚರ್ಚಿಸಿ, ವಿಷಯದ ಬಗ್ಗೆ ಸತ್ಯಾಸತ್ಯತೆ ಪರಿಶೀಲಿಸಲಿದೆ.

ನೀಟ್ ಪರೀಕ್ಷೆ: ಕೇರಳದಲ್ಲಿ ವಿದ್ಯಾರ್ಥಿನಿಯರ ಬ್ರಾ ತೆಗಿಸಿದ ಐವರು ಮಹಿಳೆಯರ ಬಂಧನ

‘ಸಂಬಂಧಿಸಿದ ಎಲ್ಲ ಜನರೊಂದಿಗೆ ಮಾತನಾಡಿದ ಬಳಿಕ ಸಮಿತಿಯು ಸ್ಥಳಕ್ಕೆ ಭೇಟಿ ನೀಡಿ ವಾಸ್ತವಾಂಶ ಪರಿಶೀಲಿಸಲಿದೆ.ಎನ್‌ಟಿಎ ಭದ್ರತೆ, ಶಿಷ್ಟಾಚಾರಗಳು, ನಿಷೇಧಿತ ವಸ್ತುಗಳು, ವಸ್ತ್ರ ಸಂಹಿತೆ ಹಾಗೂ ನಗರ ಸಂಯೋಜಕರು, ಕೇಂದ್ರದ ಅಧೀಕ್ಷಕರು, ವೀಕ್ಷಕರು ಮಾರ್ಗಸೂಚಿ ಅನುಸರಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಲಿದೆ. ಸಮಿತಿಯು ಅಗತ್ಯ ಶಿಫಾರಸುಗಳನ್ನು ಮಾಡಲಿದೆ’ ಎಂದು ಎನ್‌ಟಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಬಂದಿದ್ದ ವಿದ್ಯಾರ್ಥಿನಿಯರನ್ನು ಬಲವಂತಗೊಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಮಂಗಳವಾರ ಕೇರಳದಲ್ಲಿ ಐವರು ಮಹಿಳೆಯರನ್ನು ಬಂಧಿಸಲಾಗಿದೆ. ಈ ವಿಷಯ ಪರಿಶೀಲಿಸಲು ಎಟಿಎ ಸತ್ಯಶೋಧನಾ ಸಮಿತಿ ರಚಿಸಿದೆ.

ನೀಟ್ ಪರೀಕ್ಷೆ ವೇಳೆ ಒಳ ಉಡುಪು ತೆಗೆಸಿದ ಆರೋಪ: ಸತ್ಯ ಶೋಧನಾ ಸಮಿತಿ ರಚನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.