ನವದೆಹಲಿ: ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಜನರಿಗೆ ಕೋವಿಡ್–19 ಲಸಿಕೆ ನೀಡಿದ ರಾಷ್ಟ್ರವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ದೇಶದಾದ್ಯಂತ ಒಟ್ಟು 75.89 ಕೋಟಿಗೂ ಹೆಚ್ಚು ಮಂದಿಗೆ ಈವರೆಗೆ ಲಸಿಕೆ ನೀಡಲಾಗಿದೆ.

ಓದಿ:ದೇಶದಾದ್ಯಂತ 75 ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಿಕೆ: ಮಾಂಡವಿಯಾ

ಸಚಿವಾಲಯದ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿ ಪ್ರಕಾರ, ಮಂಗಳವಾರದ ವೇಳೆಗೆ ಗ್ರಾಮೀಣ ಪ್ರದೇಶಗಳ ಲಸಿಕಾ ಕೇಂದ್ರಗಳಲ್ಲಿ ಶೇ 62.54 ಮತ್ತು ನಗರ ಪ್ರದೇಶಗಳ ಲಸಿಕಾ ಕೇಂದ್ರಗಳಲ್ಲಿ ಶೇ 36.30ರಷ್ಟು ಲಸಿಕೆ ನೀಡಲಾಗಿದೆ.

ಈವರೆಗೆ ಶೇ 52.5ರಷ್ಟು ಪುರುಷರಿಗೆ, ಶೇ 47.5ರಷ್ಟು ಮಹಿಳೆಯರಿಗೆ ಹಾಗೂ ಶೇ 0.02ರಷ್ಟು ತೃತೀಯ ಲಿಂಗಿಗಳಿಗೆ ಲಸಿಕೆ ನೀಡಲಾಗಿದೆ.

ಈವರೆಗೆ ದೇಶದಲ್ಲಿ 18 ವರ್ಷ ಮೇಲ್ಪಟ್ಟ ಶೇ 60.7ರಷ್ಟು ಮಂದಿ ಕನಿಷ್ಠ ಒಂದು ಡೋಸ್ ಲಸಿಕೆ ಪಡೆದಿದ್ದಾರೆ.

ಓದಿ:ಲಸಿಕೆಯಿಂದ ಕೋವಿಡ್ ಪಿಡುಗು ಅಂತ್ಯವಾಗಲು ಸಾಧ್ಯವೆ? ಡಬ್ಲ್ಯುಎಚ್ಒ ಅನುಮಾನ

‘ಕನಿಷ್ಠ ಒಂದು ಡೋಸ್ ಮತ್ತು ಎರಡೂ ಡೋಸ್‌ಗಳನ್ನು ಪಡೆದವರ ಸಂಖ್ಯೆ ವಿಶ್ವದಲ್ಲೇ ಭಾರತದಲ್ಲಿ ಹೆಚ್ಚು. ಸರಾಸರಿ ಲಸಿಕೆ ನೀಡಿಕೆಯೂ ನಮ್ಮಲ್ಲೇ ಹೆಚ್ಚಿದೆ’ ಎಂದು ಸಚಿವಾಲಯ ಹೇಳಿದೆ.

ಅಮೆರಿಕದಲ್ಲಿ 17.8 ಕೋಟಿ ಮಂದಿ ಎರಡೂ ಡೋಸ್ ಲಸಿಕೆ ಪಡೆದಿದ್ದರೆ, ಭಾರತದಲ್ಲಿ 18.1 ಕೋಟಿ ಮಂದಿ ಪಡೆದಿದ್ದಾರೆ. ಶೇ 100ರಷ್ಟು ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿದೆ. ಶೇ 81.1ರಷ್ಟು ಮುಂಚೂಣಿ ಕಾರ್ಯಕರ್ತರು ಎರಡನೇ ಡೋಸ್ ಪಡೆದಿದ್ದಾರೆ.

ಶೇ 98.8ರಷ್ಟು ಆರೋಗ್ಯ ಕಾರ್ಯಕರ್ತರು ಮೊದಲ ಡೋಸ್ ಲಸಿಕೆ ಪಡೆದಿದ್ದರೆ, ಶೇ 84.7ರಷ್ಟು ಆರೋಗ್ಯ ಕಾರ್ಯಕರ್ತರು ಎರಡೂ ಡೋಸ್‌ಗಳನ್ನೂ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.