ನವದೆಹಲಿ: ’ನರ್ಸಿಂಗ್ ಪದವಿ ಪ್ರಮಾಣ ಪತ್ರ ಹೊಂದಿರುವ ನರ್ಸ್ಗಳು ಇನ್ನು ಮುಂದೆ ದೇಶದ ಯಾವ ಮೂಲೆಯಲ್ಲಾದರೂಅಭ್ಯಾಸ ನಡೆಸಬಹುದು‘ ಎಂದು ಸುಪ್ರೀಂಕೋರ್ಟ್ ಗುರುವಾರ ತೀರ್ಪು ನೀಡಿದೆ.

ನರ್ಸಿಂಗ್ ಸಂಸ್ಥೆಗಳು ಭಾರತ ಮತ್ತು ವಿಶ್ವದಾದ್ಯಂತ ಪ್ರಾಕ್ಟೀಸ್ ಮಾಡಲುಭಾರತೀಯ ನರ್ಸಿಂಗ್ ಕೌನ್ಸಿಲ್ (ಐಎನ್ಸಿ) ಅನುಮೋದನೆ ಅಗತ್ಯ ಎಂದುಬಾಂಬೆ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಖಾಸಗಿ ನರ್ಸಿಂಗ್ ಕಾಲೇಜುಗಳ ಆಡಳಿತ ಮಂಡಳಿ ಮೇಲ್ಮನವಿ ಸಲ್ಲಿಸಿತ್ತು.

ಈ ಪ್ರಕರಣದ ವಿಚಾರಣೆ ನಡೆಸಿದನ್ಯಾಯಮೂರ್ತಿ ರೊಹಿಂಟನ್ ನೇತೃತ್ವದ ದ್ವಿಸದಸ್ಯ ಪೀಠ, ‘ರಾಜ್ಯ ಸರ್ಕಾರದ ಮಾನ್ಯತೆ ಪಡೆದ ಯಾವುದೇ ಶಿಕ್ಷಣ ಸಂಸ್ಥೆಯ ನರ್ಸಿಂಗ್ ಪದವಿ ಅಥವಾ ಡಿಪ್ಲೊಮಾ ಪ್ರಮಾಣಪತ್ರ ಹೊಂದಿದ್ದರೆ ಆಶುಶ್ರೂಷಕರು ದೇಶದ ಯಾವ ಪ್ರದೇಶದಲ್ಲಾದರೂನರ್ಸಿಂಗ್ ಅಭ್ಯಾಸ ಮಾಡಬಹುದು. 1947ರ ನರ್ಸಿಂಗ್ ಕೌನ್ಸಿಲ್ ಕಾಯ್ದೆಯಲ್ಲೂ ಯಾವುದೇ ನಿರ್ಬಂಧವಿಲ್ಲ’ಎಂದು ಅಭಿಪ್ರಾಯಪಟ್ಟಿದೆ.

‘ಐಎನ್ಸಿ ಮಾನ್ಯತೆ ಇಲ್ಲದ ಸಂಸ್ಥೆಗಳಲ್ಲಿ ಅಧ್ಯಯನ ಮಾಡುವವರು ಆಯಾ ರಾಜ್ಯದಲ್ಲಿ ಮಾತ್ರ ಪ್ರಾಕ್ಟೀಸ್ ಮಾಡಬೇಕು’ ಎಂದುಟ್ರೈನ್ಡ್ ನರ್ಸಸ್ ಅಸೋಸಿಯೇಷನ್ ಆಫ್ ಇಂಡಿಯಾ(ಟಿಎನ್ಎಐ) ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.