ಭುವನೇಶ್ವರ: ಒಡಿಶಾ ಮೂಲದ ಡಿಸ್ಟಿಲರಿ ಸಮೂಹದ ಕಚೇರಿಯಲ್ಲಿ ಶನಿವಾರವೂ ಆದಾಯ ಇಲಾಖೆಯ (ಐಟಿ) ತಪಾಸಣೆ ಮುಂದುವರಿದೆ. ದಾಖಲೆಯಿಲ್ಲದ ಜಪ್ತಿ ಮಾಡಿದ ಮೊತ್ತ ₹290 ಕೋಟಿ ತಲುಪಬಹುದೆಂದು ಅಂದಾಜಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆ ಮೂಲಕ ಏಕಕಾಲದಲ್ಲಿ ನಡೆದ ಅತಿದೊಡ್ಡ ಐಟಿ ಕಾರ್ಯಾಚರಣೆ ಇದಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಈವರೆಗೆ ಐಟಿ ಅಧಿಕಾರಿಗಳು ದಾಖಲೆಯಿಲ್ಲದ ₹225 ಕೋಟಿ ನಗದು ಜಪ್ತಿ ಮಾಡಿದ್ದಾರೆ. ₹500 ಮುಖಬೆಲೆಯ ನೋಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗಿವೆ. ಪತ್ತೆ ಮಾಡಲಾದ ಹಣವನ್ನು ಸರ್ಕಾರಿ ಬ್ಯಾಂಕ್ ಖಾತೆಗಳಲ್ಲಿ ಜಮೆ ಮಾಡಲಾಗುತ್ತಿದೆ.
.ಭುವನೇಶ್ವರ | ತೆರಿಗೆ ವಂಚನೆ: ₹ 220 ಕೋಟಿ ನಗದು ಜಪ್ತಿ.ಐಟಿ ದಾಳಿ: ₹50 ಕೋಟಿ ನೋಟು ಲೆಕ್ಕ ಮಾಡುವಷ್ಟರಲ್ಲಿ ‘ಸುಸ್ತಾಗಿ’ ನಿಂತ ಯಂತ್ರಗಳು.
40 ಯಂತ್ರಗಳಿಂದ ಹಣ ಎಣಿಕೆ...

ಸುಮಾರು 40ರಷ್ಟು ದೊಡ್ಡ ಮತ್ತು ಸಣ್ಣ ಯಂತ್ರಗಳ ಮೂಲಕ ಹಣ ಎಣಿಕೆ ನಡೆಯುತ್ತಿದೆ. ಹಣ ಎಣಿಕೆ ಆದಷ್ಟು ಬೇಗ ಪೂರ್ಣಗೊಳಿಸಲು ಇಲಾಖೆಯ ಹೆಚ್ಚಿನ ಅಧಿಕಾರಿಗಳು ಮತ್ತು ಬ್ಯಾಂಕ್ ಸಿಬ್ಬಂದಿ ನಿಯೋಜಿಸಲಾಗಿದೆ. ಜಪ್ತಿ ಮಾಡಲಾದ ಹಣವನ್ನು ಸರ್ಕಾರಿ ಬ್ಯಾಂಕ್ಗಳಿಗೆ ರವಾನಿಸಲು ಹೆಚ್ಚಿನ ವಾಹನಗಳ ವ್ಯವಸ್ಥೆ ಮಾಡಲಾಗಿದೆ.

ಆದಾಯ ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸೆಂಬರ್ 6ರಂದು ಬೌದ್ ಡಿಸ್ಟಿಲರಿ ಪ್ರೈವೇಟ್ ಲಿಮಿಟೆಡ್ನ (ಬಿಡಿಪಿಎಲ್) ಒಡಿಶಾ ಹಾಗೂ ಜಾರ್ಖಂಡ್ನ ವಿವಿಧ ಕಚೇರಿಗಳ ಮೇಲೆ ಐ.ಟಿ ದಾಳಿ ನಡೆದಿತ್ತು.

ಕಾಂಗ್ರೆಸ್ ಸಂಸದನಿಗೆ ಸಂಬಂಧಿಸಿದ ಸ್ಥಳಗಳಲ್ಲೂ ಐ.ಟಿ ದಾಳಿ...

ಜಾರ್ಖಂಡ್ನ ಕಾಂಗ್ರೆಸ್ ರಾಜ್ಯಸಭಾ ಸಂಸದ ಧೀರಜ್ ಪ್ರಸಾದ್ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲೂ ಐಟಿ ಶೋಧ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಮತ್ತೆ 20 ಚೀಲಗಳಲ್ಲಿ ತುಂಬಿಟ್ಟಿದ್ದ ಹಣ ಪತ್ತೆ...

ಶುಕ್ರವಾರದ ವರೆಗೆ 156 ಚೀಲಗಳಲ್ಲಿ ತುಂಬಿಟ್ಟಿರುವ ಹಣ ಪತ್ತೆ ಹಚ್ಚಲಾಗಿತ್ತು. ಬೊಲಾಂಗಿರ್ ಜಿಲ್ಲೆಯ ಸುದಾಪಾರ ಪ್ರದೇಶದಲ್ಲಿ ಶನಿವಾರದಂದು 20 ಚೀಲಗಳಲ್ಲಿ ತುಂಬಿಟ್ಟಿದ್ದ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಮಾತ್ರ ₹50 ಕೋಟಿ ನಗದು ಇರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

150 ಅಧಿಕಾರಿಗಳಿಂದ ಕಾರ್ಯಾಚರಣೆ...

ಡಿಸ್ಟಿಲರಿ ಸಮೂಹದ ಮೇಲೆ ನಡೆದ ಐಟಿ ದಾಳಿಯಲ್ಲಿ ಸುಮಾರು 150 ಅಧಿಕಾರಿಗಳು ಭಾಗಿಯಾಗಿದ್ದಾರೆ. ಹೈದರಾಬಾದ್ನ ಮತ್ತಷ್ಟು 20 ಅಧಿಕಾರಿಗಳನ್ನು ಡಿಜಿಟಲ್ ದಾಖಲೆಗಳ ಪರಿಶೀಲನೆಗಾಗಿ ನಿಯೋಜಿಸಲಾಗಿದೆ.

ಸಂಬಾಲ್ಪುರ, ರೂರ್ಕೆಲಾ, ಬೊಲಾಂಗಿರ್, ಸುಂದರ್ಗಢ, ತಿತಿಲ್ಗಢ, ಭುವನೇಶ್ವರದಲ್ಲಿ ಐಟಿ ದಾಳಿ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.