ನವದೆಹಲಿ: ಭಾರತದಲ್ಲಿ ವರದಿ ಆಗಿರುವ 358 ಓಮೈಕ್ರಾನ್ ಪ್ರಕರಣಗಳಲ್ಲಿ 183 ಪ್ರಕರಣಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಅದರಲ್ಲಿ, 87 ಸೋಂಕಿತರು ಎರಡೂ ಡೋಸ್ ಲಸಿಕೆಗಳನ್ನು ಪಡೆದಿದ್ದಾರೆ. ಮೂವರು ಬೂಸ್ಟರ್ ಡೋಸ್ ಲಸಿಕೆ ಪಡೆದಿದ್ದಾರೆ ಮತ್ತು 121 ಸೋಂಕಿತರು ವಿದೇಶಗಳಿಂದ ದೇಶಕ್ಕೆ ಮರಳಿದ್ದಾರೆ ಎಂದು ಸರ್ಕಾರ ತಿಳಿಸಿದೆ.

ಇಬ್ಬರು ಒಂದು ಡೋಸ್ ಲಸಿಕೆ ಪಡೆದವರು, ಏಳು ಮಂದಿ ಲಸಿಕೆಯನ್ನೇ ಪಡೆಯದವರು ಮತ್ತು ದೇಶದ ರಾಷ್ಟ್ರೀಯ ಲಸಿಕೆ ಕಾರ್ಯಕ್ರಮದ ಅಡಿ ಲಸಿಕೆ ಪಡೆಯಲು ಯೋಗ್ಯರಲ್ಲದ16 ಮಂದಿ ಅವರಲ್ಲಿ ಇದ್ದಾರೆ. ಇನ್ನೂ 73 ಜನರ ಲಸಿಕೆ ಸ್ಥಾನಮಾನದ ಕುರಿತು ಮಾಹಿತಿ ಇಲ್ಲ.44 ಪ್ರಕರಣಗಳಲ್ಲಿ ಸೋಂಕಿತರುವಿದೇಶಗಳಿಂದ ಮರಳಿರುವ 121 ಸೋಂಕಿತರ ಸಂಪರ್ಕಕ್ಕೆ ಬಂದವರು. ಇನ್ನು 18 ಜನರ ಕುರಿತು ಮಾಹಿತಿ ಇನ್ನು ಲಭ್ಯವಾಗಿಲ್ಲ ಎಂದುಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ನ (ಐಸಿಎಂಆರ್) ಮಹಾನಿರ್ದೇಶಕ ಡಾ. ಬಲರಾಮ್ ಭಾರ್ಗವ ಮಾತನಾಡಿ, ‘ದೇಶದಲ್ಲಿ ಈಗಲೂ ಡೆಲ್ಟಾ ರೂಪಾಂತರಿ ತಳಿಯೇ ಹೆಚ್ಚು ಪ್ರಬಲವಾಗಿರುವುದು. ಹಾಗಾಗಿ, ಕೋವಿಡ್–19 ವಿರುದ್ಧ ಮೊದಲು ಅನುಸರಿಸುತ್ತಿದ್ದ ಮಾನದಂಡಗಳನ್ನೇ ಈಗಲೂ ನಾವು ಮುಂದುವರಿಸಬೇಕು. ಲಸಿಕೆ ಅಭಿಯಾನಕ್ಕೆ ವೇಗ ನೀಡಬೇಕು’ ಎಂದರು.

ಓಮೈಕ್ರಾನ್ ಸೋಂಕು ಗಂಭೀರವಾದ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ. ಭಾರತದಲ್ಲಿ ಪತ್ತೆಯಾಗಿರುವ ಬಹುತೇಕ ಓಮೈಕ್ರಾನ್ ಪ್ರಕರಣಗಳಲ್ಲಿ ಲಕ್ಷಣಗಳು ಸೌಮ್ಯ ರೀತಿಯಲ್ಲಿ ಇವೆ. ಆದ್ದರಿಂದ ಓಮೈಕ್ರಾನ್ ಸೋಂಕಿತರಿಗೆ ನೀಡುವ ಚಿಕಿತ್ಸೆಯು ಕೊರೊನಾದ ಇತರ ತಳಿಗಳ ಸೋಂಕಿಗೆ ನೀಡುವ ಚಿಕಿತ್ಸೆಯ ಮಾದರಿಯಲ್ಲೇ ಇರುತ್ತದೆ ಎಂದು ಹೇಳಿದರು.

108 ದೇಶಗಳಲ್ಲಿ ಸುಮಾರು 1.51 ಲಕ್ಷ ಓಮೈಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. 26 ಜನರು ಮೃತಪಟ್ಟಿದ್ದಾರೆ ಎಂದರು.

ಉತ್ತರ ಪ್ರದೇಶ, ಮಹಾರಾಷ್ಟ್ರದಲ್ಲಿ ರಾತ್ರಿ ಕರ್ಫ್ಯೂ

* ಕೋವಿಡ್–19 ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಉತ್ತರ ಪ್ರದೇಶದಲ್ಲಿ ರಾತ್ರಿ 11 ರಿಂದ ಬೆಳಿಗ್ಗೆ 5ರ ವರೆಗೆ ಕರ್ಫ್ಯೂ ಜಾರಿ ಮಾಡಲಾಗಿದೆ

* ಸಮಾರಂಭಗಳಲ್ಲಿ ಪಾಲ್ಗೊಳ್ಳಲು 200 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ

* ವಿದೇಶಗಳಿಂದ ಬಂದವರಿಗೆ ಓಮೈಕ್ರಾನ್ ಪರೀಕ್ಷೆ ಹಾಗೂ ಮಾಸ್ಕ್ ಧರಿಸುವುದು ಕಡ್ಡಾಯ ಮಾಡಲಾಗಿದೆ

* ಕೋವಿಡ್ ಪ್ರಸರಣವನ್ನು ತಡೆಯುವ ದಿಸೆಯಲ್ಲಿ ಕ್ರಿಸ್ಮಸ್, ಹೊಸ ವರ್ಷಾಚರಣೆ ಹಾಗೂ ಮದುವೆ ಸೇರಿದಂತೆ ಇತರೆ ಸಮಾರಂಭಗಳಲ್ಲಿ ಜನಸಂದಣಿಯನ್ನು ನಿಯಂತ್ರಿಸಲು ಮಹಾರಾಷ್ಟ್ರ ಸರ್ಕಾರ ಹೊಸ ಮಾರ್ಗಸೂಚಿ ಜಾರಿಗೆ ತಂದಿದೆ

* ಮಹಾರಾಷ್ಟ್ರದಲ್ಲಿ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೂ ಕರ್ಫ್ಯೂ ಜಾರಿ ಮಾಡಲಾಗಿದೆ

* ಒಳಾಂಗಣ ಮದುವೆ ಸಮಾರಂಭದಲ್ಲಿ ಕೇವಲ 100 ಜನ ಹಾಗೂ ಹೊರಾಂಗಣ ಮದುವೆಯಲ್ಲಿ ಕೇವಲ 250 ಮಂದಿಗೆ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ

*ಜಿಮ್, ಸ್ಪಾ, ಹೋಟೆಲ್, ಚಿತ್ರಮಂದಿರಗಳಿಗೆ ಶೇಕಡ 50ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.