ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಜರ್ಮನಿಯ ಬರ್ಲಿನ್‌ನಲ್ಲಿ ಭಾರತೀಯ ಪತ್ರಕರ್ತರಿಗೆ 'ಓ ಮೈ ಗಾಡ್ (ಓ ದೇವರೇ)' ಎಂದು ಪ್ರತಿಕ್ರಿಯಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಬರ್ಲಿನ್‌ನಲ್ಲಿ ನಡೆದ ಪ್ರಧಾನಿಯವರ ಕಾರ್ಯಕ್ರಮವನ್ನು ವರದಿ ಮಾಡಲು ಅವಕಾಶ ನೀಡಲಿಲ್ಲ ಎಂದು ಪತ್ರಕರ್ತರು ಪ್ರಧಾನಿ ಮೋದಿಯವರ ಗಮನಕ್ಕೆ ತರುತ್ತಾರೆ. ಆಗ ಮೋದಿ ‘ಓ ಮೈ ಗಾಡ್’ ಎಂದು ಪ್ರತಿಕ್ರಿಯಿಸುತ್ತಾರೆ.

ಅಲ್ಲದೇ, ಪತ್ರಕರ್ತರಿಗೆ ಅವಕಾಶ ನೀಡದ ಬಗ್ಗೆ ವಿಚಾರಿಸುವುದಾಗಿ ಅವರು ಮಾಧ್ಯಮದವರಿಗೆ ತಿಳಿಸಿ ಮುನ್ನಡೆಯುತ್ತಾರೆ. ಸದ್ಯ ಈ ವಿಡಿಯೊ ವೈರಲ್ ಆಗಿದೆ.

ಈ ವಿಡಿಯೊವನ್ನು ಮೀಮ್‌ಗಳಿಗೂ ಬಳಸಿಕೊಳ್ಳಲಾಗುತ್ತಿದ್ದು, ವ್ಯಂಗ್ಯ ಮಾಡಲಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಮೂರು ರಾಷ್ಟ್ರಗಳ ಪ್ರವಾಸ ಕೈಗೊಂಡರು. ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರ ಆಹ್ವಾನದ ಮೇರೆಗೆ ಮೇ 2 ರಂದು ಬರ್ಲಿನ್‌ಗೆ ಭೇಟಿ ನೀಡುವುದಾಗಿ ಹೇಳಿಕೆಯಲ್ಲಿ ಮೋದಿ ತಿಳಿಸಿದ್ದರು. ಡೆನ್ಮಾರ್ಕ್‌ನ ಕೋಪನ್‌ಹೇಗನ್‌ನಲ್ಲಿ ಮೇ 3–4 ರಂದು ನಡೆಯುವ ದ್ವಿಪಕ್ಷೀಯ ಮಾತುಕತೆಯಲ್ಲಿ ಹಾಗೂ ಭಾರತ-ನಾರ್ಡಿಕ್ ಎರಡನೇ ಶೃಂಗಸಭೆಯಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದರು.

'ಪ್ರಧಾನಿ ನರೇಂದ್ರ ಮೋದಿ ಅವರ 3 ದಿನಗಳ, 3 ರಾಷ್ಟ್ರಗಳ ಪ್ರವಾಸವು ಅತ್ಯಂತ ಫಲದಾಯಕವಾಗಿದೆ. ಹೂಡಿಕೆ ಮತ್ತು ವ್ಯಾಪಾರ ಒಪ್ಪಂದಗಳು, ಶುದ್ಧ ಇಂಧನಗಳಿಗೆ ಸಂಬಂಧಿಸಿದ ಹೊಸ ಪಾಲುದಾರಿಕೆಗಳು, ಕೌಶಲ್ಯ ಅಭಿವೃದ್ಧಿ ಮತ್ತು ನಾವಿನ್ಯತೆಯ ಸಹಭಾಗಿತ್ವ ಹಾಗೂ ಯುರೋಪ್‌ನ ಪಾಲುದಾರರೊಂದಿಗೆ ಸಹಕಾರ ಬಲಗೊಂಡಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.