ನವದೆಹಲಿ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾರಲ್ ಕಚ್ಚಾ ತೈಲದ ಬೆಲೆ 110 ಡಾಲರ್‌ನಷ್ಟಿರುವುದು ಜಾಗತಿಕ ಆರ್ಥಿಕತೆಗೆ ಹಣದುಬ್ಬರಕ್ಕಿಂತಲೂ ದೊಡ್ಡ ಬೆದರಿಕೆ ಒಡ್ಡಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್‌ದೀಪ್ ಸಿಂಗ್ ಪುರಿ ಹೇಳಿದ್ದಾರೆ.

‘ಒಂದು ಬ್ಯಾರಲ್ ತೈಲ ಬೆಲೆ 110 ಡಾಲರ್‌ನಲ್ಲೇ ಉಳಿದರೆ ನೀವು ಹಣದುಬ್ಬರದ ಬಗ್ಗೆ ಮಾತ್ರ ಮಾತನಾಡಲಾಗದು. ಅದಕ್ಕಿಂತ ದೊಡ್ಡ ಬೆದರಿಕೆಯ ಬಗ್ಗೆ ಮಾತನಾಡಬೇಕಾಗುತ್ತದೆ’ ಎಂದು ಪುರಿ ಅವರು ದಾವೋಸ್‌ನಲ್ಲಿ ‘ಸಿಎನ್‌ಬಿಸಿ ಟಿವಿ18’ಗೆ ನೀಡಿದ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಅಬಕಾರಿ ಸುಂಕ ಕಡಿತ – ಪೆಟ್ರೋಲ್ ₹9.5, ಡೀಸೆಲ್ ₹7 ಇಳಿಕೆ: ನಿರ್ಮಲಾ ಸೀತಾರಾಮನ್

‘ಜಾಗತಿಕ ಆರ್ಥಿಕತೆಯು ಆ ದಿಶೆಯಲ್ಲಿ ಸಾಗಿದರೆ, ತೈಲ ಉತ್ಪಾದಕರೂ ಸೇರಿದಂತೆ ಪ್ರತಿಯೊಬ್ಬರೂ ಹಣದುಬ್ಬರದ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಅವರು ಹೇಳಿದ್ದಾರೆ.

ಹಣದುಬ್ಬರ ನಿಯಂತ್ರಿಸುವುದಕ್ಕಾಗಿ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಸ್ ಸುಂಕವನ್ನು ಶನಿವಾರ ಪ್ರತಿ ಲೀಟರಿಗೆ ಕ್ರಮವಾಗಿ ₹8 ಮತ್ತು ₹6 ಕಡಿತ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.