ಗುವಾಹಟಿ: ದೇಶದ ಹಲವು ರಾಜ್ಯಗಳಲ್ಲಿ ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಆದರೆ ಅಸ್ಸಾಂನಲ್ಲಿ ಕೇವಲ ಒಂದೇ ಒಂದು ಸಕ್ರಿಯ ಪ್ರಕರಣವ ದಾಖಲಾಗಿದೆ ಎಂದು ಎನ್‌ಎಚ್‌ಎಂ ನಿರ್ದೇಶಕ ಮನೋಜ್ ಚೌಧರಿ ಹೇಳಿದ್ದಾರೆ.

‘ಈಗ ನಮ್ಮಲ್ಲಿ ಮಾರ್ಚ್ 18 ರಂದು ಕೇವಲ ಒಂದು ಸಕ್ರಿಯ ಕೋವಿಡ್ -19 ಪ್ರಕರಣವು ಪತ್ತೆಯಾಗಿದೆ. ಈ ಪ್ರಕರಣದ ಮೇಲೆ ತೀವ್ರ ನಿಗಾ ಇರಿಸಿದ್ದೇವೆ’ ಎಂದು ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ಎಚ್‌ಎಂ) ನಿರ್ದೇಶಕ ಮನೋಜ್ ಚೌಧರಿ ಐಎಎನ್ಎಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ರಾಜ್ಯಾದ್ಯಂತ ಕೋವಿಡ್–19 ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸಲು ಸೂಚನೆ ನೀಡಲಾಗಿದೆ. ವಿಮಾನ ನಿಲ್ದಾಣಗಳು ಮತ್ತು ರೈಲು ನಿಲ್ದಾಣಗಳಲ್ಲಿ ಕಡ್ಡಾಯ ಪರೀಕ್ಷೆಯನ್ನು ನಿಲ್ಲಿಸಲಾಗಿದ್ದರೂ, ರೋಗಲಕ್ಷಣ ಕಂಡು ಬಂದ ರೋಗಿಗಳಿಗೆ ಪರೀಕ್ಷೆಗಳಿಗೆ ಒಳಗಾಗಲು ತಿಳಿಸಲಾಗಿದೆ. ಇನ್ಫ್ಲುಯೆನ್ಸ ವೈರಸ್ ರೀತಿಯ ಲಕ್ಷಣಗಳನ್ನು ಹೊಂದಿರುವ ರೋಗಿಗಳು ಮಾತ್ರ ಕಡ್ಡಾಯವಾಗಿ ಆಸ್ಪತ್ರೆಗಳಲ್ಲಿ ಕೋವಿಡ್ -19 ಪರೀಕ್ಷೆಗಳಿಗೆ ಒಳಗಾಗಬೇಕು ಎಂದು ಮನೋಜ್ ಹೇಳಿದ್ದಾರೆ.

ಕೋವಿಡ್–19 ತಡೆಗಟ್ಟುವ ಮಾರ್ಗ ಸೂಚಿಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಮನೋಜ್ ಚೌಧರಿ ತಿಳಿಸಿದ್ದಾರೆ.

ಇವನ್ನೂ ಓದಿ: ಪತಿಯನ್ನು ಹೆದ್ದಾರಿಯಲ್ಲೇ ಬಿಟ್ಟು ತವರಿಗೆ ಮರಳಿದ ಪತ್ನಿ: ವಿಚಿತ್ರವಾಗಿದೆ ಕಾರಣ!

ಮೊಸಳೆ ಬಂತು ಮೊಸಳೆ.. ವದಂತಿ: ಚಂಬಲ್ ನದಿಯಲ್ಲಿ ಮುಳುಗಿ ಐವರು ಯಾತ್ರಿಗಳು ಸಾವು

ಗೋಲ್ಡಿ ಬ್ರಾರ್ ಜೊತೆ ಮಾತನಾಡು, ಇಲ್ಲದಿದ್ದರೆ.. ನಟ ಸಲ್ಮಾನ್ಗೆ ಮತ್ತೆ ಬೆದರಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.